ಮಡಿಕೇರಿ: ಮನೆ ಅಗ್ನಿಗಾಹುತಿ, ಅಪಾರ ನಷ್ಟ

Update: 2022-05-14 12:55 GMT

ಮಡಿಕೇರಿ ಮೇ 14 : ಮನೆಯೊಂದು ಅಗ್ನಿಗಾಹುತಿಯಾಗಿ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಹಾನಿಗೀಡಾದ ಘಟನೆ ಮಡಿಕೇರಿಯ ಮೆಡಿಕಲ್ ಕಾಲೇಜ್ ಸಮೀಪ ನಡೆದಿದೆ.

 ಸುನೀಲ್ ಡಿಸೋಜ ಎಂಬುವವರಿಗೆ ಸೇರಿದ ಮನೆ ಇದಾಗಿದ್ದು, ಮಧ್ಯಾಹ್ನ ಮನೆಯನ್ನು ಅಗ್ನಿ ಆವರಿಸಿದೆ. ವಿದ್ಯುತ್ ಶಾರ್ಟ್ ಸಕ್ರ್ಯೂಟ್ ನಿಂದ ಅನಾಹುತ ಸಂಭವಿಸಿದೆ ಎಂದು ಹೇಳಲಾಗಿದ್ದು, ಮನೆಯಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಸಾವು, ನೋವು ಉಂಟಾಗಿಲ್ಲ. ಅಗ್ನಿ ಮನೆ ತುಂಬಾ ವ್ಯಾಪಿಸಿದ ಕಾರಣ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ನಿಯಂತ್ರಿಸುವ ಪ್ರಯತ್ನ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News