ಬಸ್‍ನಲ್ಲಿ ಮಕ್ಕಳ ಪ್ರಯಾಣದ ಎಲ್ಲಾ ಸಮಯದಲ್ಲೂ ಅಳತೆಗೋಲನ್ನು ಉಪಯೋಗಿಸುವಂತಿಲ್ಲ: ಕೆಎಸ್ಸಾರ್ಟಿಸಿ

Update: 2022-05-14 16:00 GMT

ಬೆಂಗಳೂರು, ಮೇ 14: ಕೆಎಸ್ಸಾರ್ಟಿಸಿ ಬಸ್‍ಗಳಲ್ಲಿ ಪ್ರಯಾಣಿಸುವ ಆರು ವರ್ಷಗಳ ಒಳಗಿನ ಮಕ್ಕಳಿಗೆ ಉಚಿತವಾಗಿ, ಆರು ವರ್ಷದಿಂದ 12 ವರ್ಷದವರೆಗಿನ ಮಕ್ಕಳಿಗೆ ಅರ್ಧ ಟಿಕೇಟನ್ನು ಪಡೆದು ಪ್ರಯಾಣಿಸಬಹುದಾಗಿದ್ದು, ಎಲ್ಲಾ ಸಮಯದಲ್ಲೂ ಅಳತೆಗೋಲನ್ನು ಉಪಯೋಗಿಸದಂತೆ ನಿರ್ವಾಹಕರಿಗೆ ನಿಗಮವು ಸೂಚಿಸಿದೆ.

ಬಸ್‍ಗಳಲ್ಲಿ ಸಂಚರಿಸುವಾಗ, ಸಾಮಾನ್ಯವಾಗಿ ಎಲ್ಲಾ ಮಕ್ಕಳಿಗೆ ಅಳತೆಗೋಲನ್ನು ಉಪಯೋಗಿಸುವ ಅವಶ್ಯಕತೆ ಇರುವುದಿಲ್ಲ. ಮಕ್ಕಳ ವಯಸ್ಸಿನ ಬಗ್ಗೆ ಅಧಿಕೃತ ದಾಖಲಾತಿಗಳನ್ನು ತೋರಿಸಿದಾಗ ಅಥವಾ ನಿರ್ವಾಹಕರಿಗೆ ಮಕ್ಕಳ ವಯಸ್ಸಿನ ಬಗ್ಗೆ ಖಚಿತವಾಗಿ ಖಾತ್ರಿಯಾದಲ್ಲಿ ಅಳತೆಗೋಲನ್ನು ಉಪಯೋಗಿಸುವ ಅವಶ್ಯಕತೆ ಇರುವುದಿಲ್ಲ. ಆದರೆ ಮಕ್ಕಳಿಗೆ ಟಿಕೇಟ್ ಪಡೆಯುವಾಗ ಮಕ್ಕಳ ಪೋಷಕರಿಗೆ ಹಾಗೂ ನಿರ್ವಾಹಕರ ಮಧ್ಯೆ ಭಿನ್ನಾಭಿಪ್ರಾಯವಿದ್ದಲ್ಲಿ, ಅಳತೆಗೋಲನ್ನು ಉಪಯೋಗಿಸುವ ಅವಶ್ಯಕತೆ ಇರುವುದಿಲ್ಲ ಎಂದು ಪ್ರಕಟನೆ ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News