×
Ad

ಸಂಸದ ನಳಿನ್ ತಾಯಿ ಖಾತೆಗೆ ಸರಕಾರದಿಂದ ಹೇಗೆ ಹಣ ಸಂದಾಯವಾಯಿತು? ಇದು ಯಾವ ಯೋಜನೆ: ಕಾಂಗ್ರೆಸ್ ಪ್ರಶ್ನೆ

Update: 2022-05-15 10:06 IST

ಮಂಗಳೂರು, ಮೇ 15: ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲು ಅವರ ತಾಯಿಯ ಖಾತೆಗೆ ಕೇಂದ್ರ ಸರಕಾರದಿಂದ ಹೇಗೆ ಹಣ ಸಂದಾಯವಾಯಿತು? ಇದು ಯಾವ ಯೋಜನೆಯ ಹಣ ಎಂದು ಕಾಂಗ್ರೆಸ್ ಪಕ್ಷ ಪ್ರಶ್ನಿಸಿದೆ.

ಈ ಬಗ್ಗೆ ಕೆಪಿಸಿಸಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ನಳಿನ್ ಕುಮಾರ್ ಭಾಷಣದ ವೀಡಿಯೊ ತುಣುಕೊಂದನ್ನು ಹಂಚಿಕೊಂಡು ಪ್ರಶ್ನಿಸಿದೆ.

ಆ ವೀಡಿಯೋದಲ್ಲಿ ಸಂಸದ ನಳಿನ್ ಮಾತನಾಡುತ್ತಾ, ಆ ವೀಡಿಯೋದಲ್ಲಿ ಸಂಸದ ನಳಿನ್ ಮಾತನಾಡುತ್ತಾ, "ಮೊನ್ನೆ ನನ್ನ ತಾಯಿ, ಅವರ ಬ್ಯಾಂಕ್ ಖಾತೆಗೆ ಒಂದು ಲಕ್ಷ ರೂ. ಬಂದಿದೆ ಎಂದು ಹೇಳಿದರು. ಎಲ್ಲಿಂದ ಅಂತ ಕೇಳಿದೆ. ನನಗೆ ಗೊತ್ತಿಲ್ಲ, ಸರಕಾರದಿಂದ ಬಂದಿದೆ ಎಂದು ತಾಯಿ ಹೇಳಿದರು. ಇದೇರೀತಿ ಇಂದು ಪ್ರತಿಯೊಬ್ಬ ರೈತರ ಬ್ಯಾಂಕ್ ಖಾತೆಗೆ 1 ಲಕ್ಷ ರೂ., 2 ಲಕ್ಷ ರೂ., 3 ಲಕ್ಷ ರೂ.ಗಳು ಬಂದಿವೆ. ಯಾರೂ ಅರ್ಜಿ ಹಾಕದೆ  ನೇರವಾಗಿ ಹಣ ಬಂದಿದ್ದರೆ ಅದು ನರೇಂದ್ರ ಮೋದಿ ಸರಕಾರದ ಕೊಡುಗೆ" ಎಂದು ಹೇಳಿದ್ದಾರೆ.

ಈ ವೀಡಿಯೋ ತುಣುಕು ಮುಂದಿಟ್ಟು ನಳಿನ್ ಕುಮಾರ್ ರನ್ನು ಪ್ರಶ್ನಿಸಿರುವ ಕಾಂಗ್ರೆಸ್, ಸಂಸದರ ತಾಯಿಯ ಖಾತೆಗೆ ಕೇಂದ್ರದಿಂದ ಹೇಗೆ ಹಣ ಸಂದಾಯವಾಯಿತು? ಇದು ಯಾವ ಯೋಜನೆಯ ಹಣ? ಲಕ್ಷಗಟ್ಟಲೆ ಸಂಬಳ ಪಡೆಯುವವರ ತಾಯಿ ಫಲಾನುಭವಿ ಆದದ್ದು ಹೇಗೆ? ಯಾವ ರೈತರ ಖಾತೆಗೆ ಲಕ್ಷಗಟ್ಟಲೆ ಹಣ ಬಂದಿದೆ? ಅಂತಹ ಯಾವ ಯೋಜನೆ ಇದೆ? ಸಂಸದರು ಮಾಹಿತಿ ನೀಡಬೇಕು ಎಂದು ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News