ಮೂರು ವರ್ಷದ ಮಕ್ಕಳಿಗೆ ಪ್ರಯಾಣ ದರ ಇಲ್ಲ: ಕೆಎಸ್ಸಾರ್ಟಿಸಿ ಸ್ಪಷ್ಟನೆ

Update: 2022-05-15 12:32 GMT

ಬೆಂಗಳೂರು, ಮೇ 15: ಮಕ್ಕಳ ಪ್ರಯಾಣ ದರವನ್ನು ಆರು ವರ್ಷದ ಮೇಲ್ಪಟ್ಟವರಿಗೆ ಮಾತ್ರ ವಿಧಿಸಲಾಗುತ್ತಿದೆ. ಮೂರು ವರ್ಷದ ಮಕ್ಕಳಿಗೆ ಯಾವುದೇ ಪ್ರಯಾಣ ದರ ವಿಧಿಸುತ್ತಿಲ್ಲ ಎಂದು ಕೆಎಸ್ಸಾರ್ಟಿಸಿ ಸ್ಪಷ್ಟನೆ ನೀಡಿದೆ.

ಈ ಕುರಿತು ಪ್ರಕಟನೆ ನಿಗಮವು ಹೊಡಿಸಿದ್ದು, ಮಕ್ಕಳ ಪ್ರಯಾಣ ದರದಲ್ಲಿ ಯಾವುದೇ ಬದಲಾವಣೆಯನ್ನು ಮಾಡಿರುವುದಿಲ್ಲ.  ಮೂರು ವರ್ಷದ ಮಕ್ಕಳಿಗೂ ಪ್ರಯಾಣ ದರ ವಿಧಿಸಲಾಗುವುದು ಎಂದು ಮಾಧ್ಯಮಗಳು ತಪ್ಪು ಮಾಹಿತಿಯನ್ನು ನೀಡಿವೆ. ಮಕ್ಕಳಿಗೆ ಪ್ರಯಾಣ ದರ ವಿಧಿಸುವಾಗ 6 ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರಯಾಣ, 6 ರಿಂದ 12ವರ್ಷದೊಳಗಿನ ಮಕ್ಕಳಿಗೆ ಅರ್ಧ ಪ್ರಯಾಣ ದರ, 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಪೂರ್ಣ ಪ್ರಯಾಣ ದರವನ್ನು ವಿಧಿಸಲಾಗುತ್ತಿದೆ ಎಂದು ವಿವರಣೆ ನೀಡಿದೆ.

ಕೆಲವೊಂದು ಸಂದರ್ಭಗಳಲ್ಲಿ, ಮಕ್ಕಳು 4 ರಿಂದ 5 ವರ್ಷ ಆಗಿದ್ದಾಗ, 6 ವರ್ಷವಾಗಿರುವ ಮಕ್ಕಳಂತೆ, ಅದೇ ರೀತಿ 11 ರಿಂದ 12 ವರ್ಷದ ಮಕ್ಕಳು 13 ವರ್ಷದ ಮಕ್ಕಳಂತೆ ಕಾಣುವ ಸಂದರ್ಭಗಳಲ್ಲಿ ಮಕ್ಕಳ ಪೋಷಕರು ಹಾಗೂ ಬಸ್ಸಿನ ಚಾಲನಾ ಸಿಬ್ಬಂದಿಗಳ ನಡುವೆ ಟಿಕೆಟ್ ಪಡೆಯುವಂತೆ ಗಲಾಟೆಗಳು ವರದಿಯಾಗುತ್ತಿರುವ ಬಗ್ಗೆ ಮನಗಂಡು ಅಕ್ಟೋಬರ್ 2021 ರಲ್ಲಿ ಸ್ಪಷ್ಟ ಸುತ್ತೋಲೆಯನ್ನು ಹೊರಡಿಸಲಾಗಿದೆ. ಈ ಬಗ್ಗೆ ಚಾಲನಾ ಸಿಬ್ಬಂದಿಗಳಿಗೂ  ತಿಳುವಳಿಕೆ ನೀಡಲಾಗಿದೆ ಎಂದು ನಿಗಮವು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News