2022-23ನೇ ಸಾಲಿನ ಶೈಕ್ಷಣಿಕ ವರ್ಷ: ರಾಜ್ಯದಾದ್ಯಂತ ಶಾಲೆಗಳು ಇಂದಿನಿಂದ ಪುನಾರಂಭ

Update: 2022-05-16 06:40 GMT

ಬೆಂಗಳೂರು: ರಾಜ್ಯದಲ್ಲಿ ಸೋಮವಾರದಿಂದ ಕಲಿಕಾ ಚೇತರಿಕೆ ಕಾರ್ಯಕ್ರಮದೊಂದಿಗೆ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ 2022-23ನೆ  ಶೈಕ್ಷಣಿಕ ಸಾಲಿನ ಚಟುವಟಿಕೆ ಗಳು ಇಂದಿನಿಂದ  ಆರಂಭಗೊಂಡಿವೆ.

ತಳಿರು ತೋರಣಗಳಿಂದ ಸಿಂಗರಿಸಿರುವ ಹಲವು ಶಾಲೆಗಳಲ್ಲಿ ಪ್ರಥಮ ದಿನವಾದ ಇಂದು ಶಿಕ್ಷಕರು ಮಕ್ಕಳಿಗೆ ನಗುಮೊಗದೊಂದಿಗೆ ಆದರದ ಸ್ವಾಗತ ನೀಡಿದರು.

ಎರಡು ವರ್ಷಗಳಿಂದ ಕೊರೊನ ಸೋಂಕು ಹೆಚ್ಚಿದ ಪರಿಣಾಮ, ಶೈಕ್ಷಣಿಕ ಅವಧಿ ಕಡಿಮೆಯಾಗಿದ್ದು, ಅದನ್ನು ಸರಿದೂಗಿಸಲು ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಆರಂಭಿಸಿದೆ. ಯೋಜನೆ ಅಡಿಯಲ್ಲಿ 1ರಿಂದ 9ನೆ ತರಗತಿಯ ವಿದ್ಯಾರ್ಥಿಗಳು ತಾವು ಕಲಿತ ಹಿಂದಿನ ಎರಡು ವರ್ಷಗಳ ವಿಷಯಗಳನ್ನು ಅಭ್ಯಾಸ ಮಾಡಬೇಕಿದೆ. ಪ್ರತಿವರ್ಷ ಮೇ 29ರಂದು ಶಾಲೆಗಳು ಪ್ರಾರಂಭವಾಗುತ್ತಿದ್ದವು.

ವಿದ್ಯಾರ್ಥಿ ಬಸ್ ಪಾಸ್ ಜೂ.30ರವರೆಗೆ ವಿಸ್ತರಣೆ: 2022-23ನೇ ಸಾಲಿನ ಭೌತಿಕ ತರಗತಿಗಳು ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಶಾಲೆಗಳು ಆರಂಭಗೊಳ್ಳುತ್ತಿದ್ದು, 2021-22ನೇ ಸಾಲಿನಲ್ಲಿ ಪಡೆದಿರುವ ವಿದ್ಯಾರ್ಥಿಗಳು ಬಸ್ ಪಾಸುಗಳನ್ನು ಇಟ್ಟುಕೊಂಡು ಜೂ.30ರವರೆಗೆ ಕೆಸ್ಸಾರ್ಟಿಸಿ ಬಸ್‍ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News