VIDEO- ಪೊಲೀಸ್ ಇಲಾಖೆಯೂ ತರಬೇತಿ ಕೊಡುತ್ತೆ: ಬಜರಂಗದಳದ ಶಸ್ತ್ರಾಸ್ತ್ರ ತರಬೇತಿಯನ್ನು ಸಮರ್ಥಿಸಿದ ಸಿಟಿ ರವಿ

Update: 2022-05-16 12:12 GMT

ಕಲಬುರಗಿ: ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ತನ್ನ ಕಾರ್ಯಕರ್ತರಿಗೆ ಕೊಡಗು ಜಿಲ್ಲೆಯ ಪೊನ್ನಂಪೇಟೆಯ ಶಾಲಾ ಆವರಣವೊಂದರಲ್ಲಿ ತ್ರಿಶೂಲ ದೀಕ್ಷೆ ಹಾಗೂ ನಿರ್ಜನ ಪ್ರದೇಶವೊಂದರಲ್ಲಿ ಬಂದೂಕು ತರಬೇತಿ ನೀಡಿರುವ ವಿಚಾರಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಪ್ರತಿಕ್ರಿಯಿಸಿದ್ದಾರೆ. 

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಶಾಲಾ ಮಕ್ಕಳಿಗೆ ತರಬೇತಿ ಕೊಟ್ಟಿರುವುದಲ್ಲ, 'ಬಜರಂಗದಳ ಕಾರ್ಯಕರ್ತರಿಗೆ ಪ್ರತಿ ವರ್ಷ ಅಭ್ಯಾಸ ವರ್ಗವನ್ನು ನಡೆಸುತ್ತಿದೆ. ರಾಜ್ಯ, ಜಿಲ್ಲಾ ಸಮಿತಿಯಿಂದ ಏರ್ ಗನ್ ಟ್ರೈನಿಂಗ್ ಕೊಡುತ್ತೆ. ಅದು ಏಕೆ 47 ಅಲ್ಲ, ಬಾಂಬ್ ಹಾಕುವ ತರಬೇತಿಯೂ ಅಲ್ಲ. ಆತ್ಮ ರಕ್ಷಣೆಯ ತರಬೇತಿಯನ್ನು ಪೊಲೀಸ್ ಇಲಾಖೆ ಕೂಡ ಆಯೋಜನೆ ಮಾಡುತ್ತೆ ಬಜರಂಗದಳವೂ ಆಯೋಜನೆ ಮಾಡಿದೆ ಅದರಲ್ಲಿ ಏನಿದೆ ವಿಶೇಷ?' ಎಂದು ಪ್ರಶ್ನಿಸಿದ್ದಾರೆ. 

ವಾರಾಣಸಿಯ ಜ್ಞಾನವಾಪಿ ಮಸೀದಿ ಸರ್ವೆ ಕಾರ್ಯ ವಿಚಾರ. ಸರ್ವೆ ಕಾರ್ಯದ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಿದೆ, ವರದಿ ಸಲ್ಲಿಸಿದ ಬಳಿಕ ಏನೆಲ್ಲಾ ಸಿಕ್ಕಿದೆ ಅನ್ನೋದು ಗೊತ್ತಾಗುತ್ತೆ ಎಂದು ಇದೇ ವೇಳೆ ತಿಳಿಸಿದರು. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News