×
Ad

ಮಾರಕಾಸ್ತ್ರ ಕೊಟ್ಟವರನ್ನು ರಾಷ್ಟ್ರದ್ರೋಹದಡಿ ಕೇಸ್ ದಾಖಲಿಸಿ ಜೈಲಿಗೆ ಅಟ್ಟಿ: ಪರಿಷತ್ ಸದಸ್ಯ ಎಸ್. ರವಿ

Update: 2022-05-16 20:33 IST
 ಎಸ್. ರವಿ

ಬೆಂಗಳೂರು:  'ವಿದ್ಯಾರ್ಥಿಗಳ ಕೈಗೆ ಮಾರಕಾಸ್ತ್ರಗಳನ್ನು ಕೊಡುವ ಕೆಲಸ ರಾಷ್ಟ್ರದ್ರೋಹದ ಕೆಲಸ. ಇದನ್ನು ಮೊದಲಿಗೆ ಬ್ಯಾನ್ ಮಾಡಬೇಕು. ಹಾಗೂ ಮಾರಕಾಸ್ತ್ರಗಳನ್ನು ವಿದ್ಯಾರ್ಥಿಗಳಿಗೆ ಕೊಟ್ಟವರು ಯಾರೇ ಆಗಿರಲಿ ಅವರನ್ನು ರಾಷ್ಟ್ರದ್ರೋಹದಡಿ ಕೇಸ್ ದಾಖಲಿಸಿ ಜೈಲಿಗೆ ಅಟ್ಟಬೇಕು' ಎಂದು ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಎಸ್. ರವಿ ಒತ್ತಾಯಿಸಿದ್ದಾರೆ.

ಈ ಬಗ್ಗೆ 'ವಾರ್ತಾ ಭಾರತಿ'ಗೆ ಪ್ರತಿಕ್ರಿಯಿಸಿರುವ ಅವರು, '' ಮೋದಿಯವರು ನಿರುದ್ಯೋಗಿಗಳಿಗೆ ಪಕೋಡ ಮಾರಿ ಅಂದರು. ಈಗ ಅವರಿಗೆ ಕೆಲಸ ಕೊಡದೆ ಕೈಗೆ ಚಾಕು ಚೂರಿ ಕೊಡುತ್ತಿದೆ. ಇದು ದೇಶದ ದುರ್ದೈವ. ಜನ ಎಚ್ಚೆತ್ತುಕೊಂಡು ಬಿಜೆಪಿಗೆ ಪಾಠ ಕಲಿಸಿದರೆ ದೇಶ ಉಳಿಯುತ್ತದೆ. ಇನ್ನು ಗೃಹಮಂತ್ರಿಗಳು, ಅವರು ಕೈಲಾಗದವರು, ನಿರ್ವಿರ್ಯರು, ಷಂಡರು. ರಾಜೀನಾಮೆ ಕೊಟ್ಟು ಮನೆಗೆ ಹೋಗೋದು ಒಳ್ಳೆಯದು'' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News