ತ್ರಿಶೂಲ ನೀಡುವ ಸಂಪ್ರದಾಯ ಇದೆ, ರಜೆ ಇದ್ದಿದ್ದಕ್ಕೆ ಶಾಲೆಯಲ್ಲಿ ತರಬೇತಿ: ನಳಿನ್ ಕುಮಾರ್ ಕಟೀಲ್

Update: 2022-05-16 15:18 GMT

ಬೆಂಗಳೂರು: ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ತನ್ನ ಕಾರ್ಯಕರ್ತರಿಗೆ ಕೊಡಗು ಜಿಲ್ಲೆಯ ಪೊನ್ನಂಪೇಟೆಯ ಶಾಲಾ ಆವರಣವೊಂದರಲ್ಲಿ ತ್ರಿಶೂಲ ದೀಕ್ಷೆ ಹಾಗೂ ನಿರ್ಜನ ಪ್ರದೇಶವೊಂದರಲ್ಲಿ ಬಂದೂಕು ತರಬೇತಿ ನೀಡಿರುವ ವಿಚಾರಕ್ಕೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯಿಸಿದ್ದಾರೆ. 

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಶಾಲೆಗೆ ರಜೆ ಇದ್ದಿದ್ದರಿಂದ ಕೊಡಗು ಜಿಲ್ಲೆ ಪೊನ್ನಂಪೇಟೆಯ ಶಾಲೆಯನ್ನು ಬಜರಂಗದಳ ಕಾರ್ಯಕರ್ತರಿಗೆ ತರಬೇತಿ ನೀಡಲು ಬಳಸಿಕೊಳ್ಳಲಾಗಿತ್ತು' ಎಂದು ಹೇಳಿದ್ದಾರೆ

ತರಬೇತಿ ಸಂದರ್ಭದಲ್ಲಿ ಆಯುಧ ಬಳಕೆ ತರಬೇತಿ ನೀಡುವುದಿಲ್ಲ. ಚಾಕುವಿಗಿಂತ ಸಣ್ಣ ಗಾತ್ರದ ತ್ರಿಶೂಲ ನೀಡುವ ಸಂಪ್ರದಾಯ ಬಜರಂಗ ದಳದಲ್ಲಿ ಇದೆ ಎಂದು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News