ಪೌರಕಾರ್ಮಿಕರಿಗೆ ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ತಾಲ್ಲೂಕು ಆಡಳಿತ ವಿಫಲ: ನಟ ಚೇತನ್ ಬೇಸರ

Update: 2022-05-16 17:48 GMT

ನಂಜನಗೂಡು,ಮೇ.16: ಪೌರಕಾರ್ಮಿಕರಿಗೆ ಅಗತ್ಯವಾದ   ಮೂಲಭೂತ ಸೌಕರ್ಯಗಳನ್ನು ಕಲ್ಪಿಸಕೊಡುವಲ್ಲಿ ತಾಲ್ಲೂಕು ಆಡಳಿತ ಅಧಿಕಾರಿಗಳು ಮತ್ತು ಜನಪ್ರತಿ ನಿಧಿಗಳ ನಿರ್ಲಕ್ಷ್ಯ ಕಾರ್ಯವೈಖರಿಯನ್ನು ಖಂಡಿಸಿ ಅಹಿಂಸ ಸಂಘಟನೆ ಮುಖಂಡ ಚಿತ್ರನಟ ಮತ್ತು ಹೋರಾಟಗಾರ ಚೇತನ್ ಬೇಸರ ವ್ಯಕ್ತಪಡಿಸಿದರು.

ತಾಲ್ಲೂಕಿನ ಹುಲ್ಲಹಳ್ಳಿ ಹೋಬಳಿಕೇಂದ್ರಕ್ಕೆ ಸೋಮವಾರ ತಾಲ್ಲೂಕು ದಸಂಸ ಸಂಘಟನೆಯ ಮುಖಂಡರೊಡನೆ ಭೇಟಿನೀಡಿ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದ ಚೇತನ್ ನಾಲ್ಕಾರು ದಶಕಗಳಿಂದ ಸೂರಿಗಾಗಿ ಹೋರಾಟ ನಡೆಸುತ್ತಿರುವ ನಂಜನಗೂಡು ತಾಲೂಕಿನ ಹುಲ್ಲಹಳ್ಳಿಯ ಪೌರಕಾರ್ಮಿಕರ ಕಾಲೋನಿಗೆ ಭೇಟಿ ನೀಡಿದ ಚೇತನ್ ಮೂಲಭೂತ ಸೌಕರ್ಯಗಳಿಂದ ವಂಚಿತರಾದ ಪೌರಕಾರ್ಮಿಕರ ಬವಣೆಯನ್ನ ವೀಕ್ಷಿಸಿ ಮರುಗಿದ್ದಾರೆ.

ಸ್ವಂತಸೂರಿಗಾಗಿ ಹೋರಾಟ ನಡೆಸುತ್ತಿರುವ ಪೌರಕಾರ್ಮಿಕರ ಹೋರಾಟಕ್ಕೆ ತಾವು ಕೈಜೋಡಿಸುವುದಾಗಿ ತಿಳಿಸಿದರು.ಮೇ 17 ರಂದು ದಸಂಸ  ವತಿಯಿಂದ ಪಾದಯಾತ್ರೆ ಕೈಗೊಂಡಿರುವುದಕ್ಕೆ ನಟ ಚೇತನ್ ಬೆಂಬಲ ಸೂಚಿಸಿ.ನಿಮ್ಮೊಂದಿಗೆ ನಾನಿದ್ದೇನೆ ಎಂಬ ಅಭಯ ನೀಡಿದ್ದಾರೆ.ಹುಲ್ಲಹಳ್ಳಿಯಿಂದ ನಂಜನಗೂಡಿಗೆ ದಸಂಸ ಪಾದಯಾತ್ರೆ ಕೈಗೊಂಡಿರು ವುದನ್ನು ಸ್ವಾಗತಿಸಿದ ಅವರು ಹೋರಾಟದಿಂದಲೇ ನಮಗೆ ನ್ಯಾಯ ಸಿಗೋದು ಆದ್ದರಿಂದ ಹೋರಾಟ ಅನಿವಾರ್ಯ ಎಂದು ಚೇತನ್ ತಿಳಿಸಿದರು.

ಬುದ್ದ,ಅಂಬೇಡ್ಕರ್ ರನ್ನ ಹೊಗಳುವ ಜನಪ್ರತಿನಿಧಿಗಳು ಮೊದಲು ಅವರ ವಿಚಾರ ಮತ್ತು ಕನಸನ್ನ ಸಾಕಾರ ಗೊಳಿಸಬೇಕೆಂದು ಸಲಹೆ ನೀಡಿದ್ದಾರೆ.ಯಾವ ಸರ್ಕಾರ ಬಂದರೂ ಬಡವರ ಪರ ನಿಲ್ಲುತ್ತಿಲ್ಲ.ಬಡವರ ಪರ ನಿಲ್ಲುವ ಸರ್ಕಾರ ಬೇಕೆಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News