ಮಂಗಳೂರು: ಅಲೋಶಿಯಸ್ ವಿದ್ಯಾರ್ಥಿ ಸಹ್ಲ್ ಅಬ್ದುಲ್‌ ರಫೀಕ್ ಬಿಕಾಂ ಪದವಿಗೆ ಮುನ್ನವೇ ಎಸಿಸಿಎ ಎಫಿಲಿಯೇಟ್

Update: 2022-05-17 12:57 GMT
ಸಹ್ಲ್ ಅಬ್ದುಲ್‌ ರಫೀಕ್, ಡಾರೆನ್ ನರೆನ್, ಮೇಘನಾ ಭಟ್

ಮಂಗಳೂರು :  ಸಂತ ಅಲೋಶಿಯಸ್ ಕಾಲೇಜಿನ ಅಂತಿಮ ವರ್ಷದ ಬಿಕಾಂ ವಿದ್ಯಾರ್ಥಿ ಸಹ್ಲ್ ಅಬ್ದುಲ್‌ ರಫೀಕ್ ಎಸಿಸಿಎ ಪರೀಕ್ಷೆಯ ಎಲ್ಲಾ ವಿಷಯಗಳನ್ನು ಪ್ರಥಮ ಸುತ್ತಿನಲ್ಲೇ ಉತ್ತೀರ್ಣರಾಗಿದ್ದು, ಪದವಿ ಮುಗಿಸುವ ಮೊದಲೇ ಎಸಿಸಿಎ ಎಫಿಲಿಯೇಟ್ ಆದ ಕಾಲೇಜಿನ ಪ್ರಥಮ ವಿದ್ಯಾರ್ಥಿಯೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಸಾಹ್ಲ್ ಅವರು ಪಿಯುನಲ್ಲಿ ವಿಜ್ಞಾನ ವಿಭಾಗದ ವಿದ್ಯಾರ್ಥಿಯಾಗಿದ್ದರೂ ಡಿಗ್ರಿ ವಿಭಾಗದಲ್ಲಿ ವಾಣಿಜ್ಯ ವಿಭಾಗಕ್ಕೆ ಸೇರಿ ಬಿಕಾಂ ಜತೆಗೆ ಎಸಿಸಿಎ ವಿಷಯಗಳನ್ನು ಕಲಿತು ಉತ್ತೀರ್ಣರಾಗಿದ್ದಾರೆ. ಪ್ರಸ್ತುತ ಇತರ ಎಸಿಸಿಎ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಲು ಅವರು ಉತ್ಸುಕರಾಗಿದ್ದಾರೆ ಎಂದು ಕಾಲೇಜು ಪ್ರಕಟನೆ ತಿಳಿಸಿದೆ.

ಅಲ್ಲದೆ ಬಿಕಾಂ ವಿಭಾಗದ ವಿದ್ಯಾರ್ಥಿಗಳಾದ ಮೇಘನಾ ಭಟ್ ಹಾಗೂ ಡಾರೆನ್ ನರೆನ್ ಮಿರಾಂಡ ಅವರು ಎಸಿಸಿಎ ಪರೀಕ್ಷೆಯ ಎಲ್ಲ ವಿಷಯಗಳನ್ನು ಪ್ರಥಮ ಸುತ್ತಿನಲ್ಲೇ ಉತ್ತೀರ್ಣರಾಗಿದ್ದಾರೆ.

ಅಸೋಸಿಯೇಶನ್ ಆಫ್ ಚಾರ್ಟರ್ಡ್ ಸರ್ಟಿಫೈಡ್ ಅಕೌಂಟೆಂಟ್ಸ್ (ಎಸಿಸಿಎ) ಸಂಸ್ಥೆಯು ಚಾರ್ಟರ್ಡ್ ಸರ್ಟಿಫೈಡ್ ಅಕೌಂಟೆಂಟ್ ಅರ್ಹತೆಯನ್ನು ನೀಡುವ ಜಾಗತಿಕ ವೃತ್ತಿಪರ ಲೆಕ್ಕ‌ ಪರಿಶೋಧಕ ಸಂಸ್ಥೆಯಾಗಿದೆ. ಇದು ವಿದೇಶದಲ್ಲಿ ಮಾತ್ರವಲ್ಲದೆ, ಭಾರತದಲ್ಲಿಯೂ ಸಾಕಷ್ಟು ಅವಕಾಶಗಳನ್ನು ನೀಡುತ್ತದೆ. ಎಸಿಸಿಎ 180 ದೇಶಗಳಲ್ಲಿ 2,00,000 ಸದಸ್ಯರು ಮತ್ತು 4,86,000 ವಿದ್ಯಾರ್ಥಿಗಳೊಂದಿಗೆ ವೇಗವಾಗಿ ಬೆಳೆಯುತ್ತಿರುವ ಅಂತರಾಷ್ಟ್ರೀಯ ಲೆಕ್ಕಪತ್ರ ಸಂಸ್ಥೆಯಾಗಿದೆ.

ಎಸಿಸಿಎ ಜಾಗತಿಕವಾಗಿ ಗುರುತಿಸಲ್ಪಟ್ಟ ಲೆಕ್ಕ ಪರಿಶೋಧಕ ಅರ್ಹತೆಯನ್ನು ಹೊಂದಿದ್ದು, ಇದು ವಿದ್ಯಾರ್ಥಿಗಳು ಮತ್ತು ವೃತ್ತಿಪರರಿಗೆ ಅಕೌಂಟಿಂಗ್, ಟ್ಯಾಕ್ಸ್ ಕನ್ಸಲ್ಟಿಂಗ್, ಅಡಿಟಿಂಗ್, ವ್ಯವಹಾರ ಮೌಲ್ಯ ಮಾಪನ, ಖಜಾನೆ ನಿರ್ವಹಣೆ ಇತ್ಯಾದಿಗಳಲ್ಲಿ ವೃತ್ತಿ ಜೀವನಕ್ಕೆ ಅಗತ್ಯವಾದ ಅಡಿಪಾಯವನ್ನು ಒದಗಿಸುತ್ತದೆ ಎಂದು ಅಲೋಶಿಯಸ್ ಕಾಲೇಜಿನ ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News