ಸೋಲಾರ್ ದೀಪದ ಬ್ಯಾಟರಿ ಕಳವು

Update: 2022-05-17 16:27 GMT

ಕೋಟ : ತೆಕ್ಕಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧೆಡೆ ಆಳವಡಿಸಲಾದ ಸೋಲಾರ್ ದೀಪದ ಬ್ಯಾಟರಿ ಮೇ ೧೦ರಿಂದ ೧೬ರ ಮಧ್ಯಾವಧಿಯಲ್ಲಿ ಕಳವಾಗಿರುವ ಬಗ್ಗೆ ವರದಿಯಾಗಿದೆ.

ಕೊಮೆ ಬೊಬ್ಬರ್ಯ ದೇವಸ್ಥಾನದ ಬಳಿ, ಮಹಾಲಿಂಗೇಶ್ವರ ದೇವಸ್ಥಾನದ ಎದುರುಗಡೆ, ತೆಕ್ಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನದ ಬಳಿ ಮತ್ತು ರಾಘವೇಂದ್ರ ಸ್ವಾಮಿ ಮಠದ ಬಳಿ, ಕೊಮೆ ಮಾರ್ಸ ಮನೆ ಬಳಿ, ತೆಕ್ಕಟ್ಟೆ ಹಿರಿಯ ಪ್ರಾಥಮಿಕ ಶಾಲೆಯ ಬಳಿ, ತೆಕ್ಕಟ್ಟೆ ಸುನಾಮಿ ಕಟ್ಟಡದ ಬಳಿ ರಾಘವೇಂದ್ರ ಮಠಕ್ಕೆ ಹೋಗುವ ಮಾರ್ಗದಲ್ಲಿ ಅಳವಡಿಸಿದ ಸೋಲಾರ ದೀಪದ ಬ್ಯಾಟರಿ ಕಳವಾಗಿರುವುದು ಕಂಡುಬಂದಿದೆ. ಒಟ್ಟು ೮ ಸೋಲಾರ್ ಬ್ಯಾಟರಿಗಳು ಕಳ್ಳತನವಾಗಿದ್ದು ಇದರ ಮೌಲ್ಯ ೩೨,೦೦೦ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News