ಮೇಲುಕೋಟೆ: ಟಿಪ್ಪು ಕಾಲದ 'ಸಲಾಂ ಆರತಿ'ಯ ಹೆಸರನ್ನು 'ಸಂಧ್ಯಾ ಆರತಿ' ಎಂದು ಬದಲಾಯಿಸುವ ಸಾಧ್ಯತೆ

Update: 2022-05-18 18:26 GMT
ಸಾಂದರ್ಭಿಕ ಚಿತ್ರ (Photo: oneindia.com)

ಮಂಡ್ಯ: ಈ ಹಿಂದಿನಿಂದಲೂ ಸಂಘಪರಿವಾರ ಸಂಘಟನೆಗಳು ಮೇಲುಕೋಟೆಯಲ್ಲಿರುವ ಚೆಲುವ ನಾರಾಯಣಸ್ವಾಮಿ ದೇವಸ್ಥಾನದಲ್ಲಿನ ಸಂಪ್ರದಾಯವಾದ ಸಲಾಂ ಆರತಿಯ ಹೆಸರನ್ನು ಬದಲಾಯಿಸಬೇಕೆಂದು ಮನವಿ ಮಾಡಿಕೊಂಡಿದ್ದವು. ಇದೀಗ ಜಿಲ್ಲಾಡಳಿತವು ಹೆಸರು ಬದಲಾವಣೆಗೆ ಶಿಫಾರಸು ಮಾಡಿದೆ ಎಂದು ತಿಳಿದು ಬಂದಿದೆ.

ಮೈಸೂರು ಸಂಸ್ಥಾನವನ್ನು ಆಳ್ವಿಕೆ ಮಾಡುತ್ತಿದ್ದ ಟಿಪ್ಪು ಸುಲ್ತಾನ್‌ ರ ಕಾಲದಲ್ಲಿ ಈ ದೇವಸ್ಥಾನದಲ್ಲಿ ಈ ಸಂಪ್ರದಾಯವು ಆರಂಭವಾಗಿತ್ತು ಎನ್ನಲಾಗಿದೆ. ಪ್ರತಿದಿನ ಸಂಜೆ 7 ಗಂಟೆಯ ವೇಳೆ ದೇವಸ್ಥಾನದ ಅರ್ಚಕರು ಸಲಾಂ ಆರತಿಯನ್ನು ದೇವರ ಹೆಸರಿನಲ್ಲಿ ನಡೆಸುತ್ತಾರೆ. ಇತ್ತೀಚೆಗೆ ಹಿಂದುತ್ವ ಸಂಘಟನೆಗಳ ಮುಖಂಡರು ಹಾಗೂ ಧಾರ್ಮಿಕ ಪರಿಷತ್‌ ಸದಸ್ಯ ಬಿ. ನವೀನ್‌ ಜಿಲ್ಲಾಧಿಕಾರಿಗೆ ಈ ನಿಟ್ಟಿನಲ್ಲಿ ಮನವಿ ಸಲ್ಲಿಸಿ, ಹಿಂದೂ ಶಾಸ್ತ್ರಗಳ ಪ್ರಕಾರದ ಹೆಸರಿಡುವಂತೆ ಮನವಿ ಮಾಡಿದ್ದರು.

ಈ ವಿಚಾರಕ್ಕೆ ಸಂಬಂಧಿಸಿ ಪಾಂಡವಪುರ ಸಹಾಯಕ ಕಮಿಷನರ್‌ ಹಾಗೂ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಯಿಂದ ಜಿಲ್ಲಾಧಿಕಾರಿ ವರದಿ ಕೇಳಿದ್ದರು. ಇಬ್ಬರು ಅಧಿಕಾರಿಗಳೂ ಹೆಸರು ಬದಲಾವಣೆ ಪ್ರಸ್ತಾವವನ್ನು ಅನುಮೋದಿಸಿದ್ದರು ಎನ್ನಲಾಗಿದೆ. ಜಿಲ್ಲಾಧಿಕಾರಿ ಸಿಎಸ್.‌ ಅಶ್ವತಿ ರಾಜ್ಯ ಮುಜುರಾಯಿ ಕಮಿಷನರ್‌ ಗೆ ಸಲಾಂ ಆರತಿಯ ಹೆಸರನ್ನು ಸಂಧ್ಯಾ ಆರತಿ ಎಂದು ಬದಲಾವಣೆ ಮಾಡುವಂತೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಮುಜುರಾಯಿ ಇಲಾಖೆ ಇನ್ನಷ್ಟೇ ತೀರ್ಮಾನ ಕೈಗೊಳ್ಳಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News