'ಹಗರಣದ ಹಾಸಿಗೆ ಹೊದ್ದು ಮಲಗಿರುವ ಸರ್ಕಾರ ಇದು': ಕಾಂಗ್ರೆಸ್ ವಾಗ್ದಾಳಿ

Update: 2022-05-20 13:39 GMT

ಬೆಂಗಳೂರು:  'ಗೃಹ ಇಲಾಖೆ - ಹಗರಣ ಶಿಕ್ಷಣ ಇಲಾಖೆ - ಹಗರಣ ಆರೋಗ್ಯ ಇಲಾಖೆ - ಹಗರಣ ಜಲಸಂಪನ್ಮೂಲ - ಹಗರಣ ಲೋಕೋಪಯೋಗಿ - ಹಗರಣ ಒಟ್ಟಿನಲ್ಲಿ ಹಗರಣದ ಹಾಸಿಗೆ ಹೊದ್ದು ಮಲಗಿರುವ ಸರ್ಕಾರ ಇದು' ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. 

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, 'ಮೋದಿಯವರು ಹಗರಣ ಮುಕ್ತ ಆಡಳಿತ ಕೊಡ್ತೀನಿ ಅಂದಿದ್ದರು ಇಲ್ಲಿ ನೋಡಿದರೆ ಇವರದೇ ಸರ್ಕಾರ ಹಗರಣಗಳನ್ನು ಬಾಚಿ ತಬ್ಬಿಕೊಂಡಿದೆ. ಭ್ರಷ್ಟಾಚಾರದ ಭಂಡ ಬಾಳೇಕೆ ಬಿಜೆಪಿಗರೇ?' ಎಂದು ಪ್ರಶ್ನಿಸಿದೆ. 

'ಈ ಸರ್ಕಾರಕ್ಕೆ ಏನಾದರು ಬುದ್ದಿ ಇದೆಯೇ? ಒಂದು ಕಡೆ ಬುದ್ಧ, ಬಸವಣ್ಣ, ನಾರಾಯಣ ಗುರು, ಭಗತ್ ಸಿಂಗ್ ರಂತಹ ಮಹನೀಯರ ಪಠ್ಯಗಳನ್ನ ತೆಗೆದು ಹಾಕುತ್ತಾರೆ. ಇನ್ನೊಂದೆಡೆ ಆರೆಸ್ಸೆಸ್ ನ ಹೆಗಡೇವಾರ್, ಸುಳ್ಳಿನ ಸರಮಾಲೆಯನ್ನೇ ಸುತ್ತುತ್ತಾ, ಯುವಕರ ದಾರಿ ತಪ್ಪಿಸುತ್ತ ಕಾಲಹರಣ ಮಾಡುವ ಸೂಲಿಬೆಲೆಯಂತಹ ಅಯೋಗ್ಯರ ಪಠ್ಯಗಳನ್ನು ಅಳವಡಿಸುತ್ತಾರೆ'' ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಡಿಗಾರಿದೆ. 

 "ಸುಳ್ಳು ಭಾಷಣ ಮಾಡಿ, ಸುಳ್ಳಿನಿಂದ ಹಣ ಮಾಡಿ, ಸುಳ್ಳಿನಿಂದಲೇ ಬದುಕುತ್ತಿರುವ ಸೂಲಿಬೆಲೆಯಿಂದ ನಮ್ಮ ಮಕ್ಕಳು ಯಾವ ಆದರ್ಶಗಳನ್ನು ಕಲಿಯಬೇಕು? ಈ ಸೂಲಿಬೆಲೆಯ ಅರ್ಹತೆಯೇನು? ಅವರ ಪಠ್ಯ ಆಯ್ಕೆ ಮಾಡಿರುವ ಚಕ್ರತೀರ್ಥರ ಅರ್ಹತೆಯೇನು? ಯಾವ ಅರ್ಹತೆಯ ಮೇಲೆ ಅವರನ್ನು ಪಠ್ಯ ಪುಸ್ತಕ ಪರಿಷ್ಕರಣ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿದ್ದೀರಿ?'' ಎಂದು ಪ್ರಶ್ನಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News