ದಾವಣಗೆರೆ: ಮೇ 27 - 28 ರಂದು 8ನೇ ಮೇ ಸಾಹಿತ್ಯ ಮೇಳ

Update: 2022-05-21 15:10 GMT

ದಾವಣಗೆರೆ:  'ಸ್ವಾತಂತ್ರ್ಯ-75: ನೆಲದ ದನಿಗಳು- ಗಳಿಸಿದ್ದೇನು? ಕಳಕೊಂಡಿದ್ದೇನು?' ಎಂಬ ವಿಷಯವಾಗಿ ನಗರದ ಬೂದಾಳು ರಸ್ತೆಯಲ್ಲಿರುವ ತಾಜ್ ಪ್ಯಾಲೆಸ್‍ನಲ್ಲಿ ಮೇ 27 ಮತ್ತು 28 ರಂದು 2 ದಿನಗಳ ಕಾಲ 8ನೇ ಮೇ ಸಾಹಿತ್ಯ ಮೇಳ ಏರ್ಪಡಿಸಲಾಗಿದೆ ಎಂದು ಗದಗಿನ ಲಡಾಯಿ ಪ್ರಕಾಶನದ ಪ್ರಕಾಶಕ ಬಸವರಾಜ್ ಸುಳಿಬಾವಿ ಹೇಳಿದರು. 

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,  ದೇಶದ ಏಕತೆ ಮತ್ತು ಸಮಗ್ರತೆಗಾಗಿ ಎಲ್ಲರಲ್ಲೂ ಭ್ರಾತೃತ್ವ ಭಾವನೆ ಮೂಡಿಸಿದ ಸಂವಿಧಾನ ರೂಪಿತಗೊಂಡು 75 ವರ್ಷಗಳು ಕಳೆದಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಸಂವಿಧಾನದ ಆಶಯಗಳ ಕುರಿತು 2 ದಿನವೂ ವಿವಿಧ ಚರ್ಚಾಗೋಷ್ಠಿಗಳು ನಡೆಯಲಿವೆ ಎಂದರು. 

ಮೇ 27 ರಂದು ಬೆಳಿಗ್ಗೆ 10ಕ್ಕೆ ಸಾಹಿತ್ಯ ಸಮ್ಮೇಳನ ಉದ್ಘಾಟನೆಯಾಗಲಿದೆ. ಮುತ್ತು ಬಿಳಿಯಲಿ ಅವರು ಸಂವಿಧಾನದ ಪ್ರಸ್ತಾವನೆ  ಓದುವರು. ಬಿ.ಶ್ರೀನಿವಾಸ್ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಶ್ರಮಿಕರು ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ. 

ಚೆನ್ನೈನ ಜಸ್ಟಿಸ್ ಕೆ ಚಂದ್ರು, ಪಿ.ಸಾಯಿನಾಥ್, ದೆಹಲಿಯ ಕವಿತಾ ಕೃಷ್ಣನ್, 'ವಾರ್ತಾಭಾರತಿ' ಪತ್ರಿಕೆಯ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ, ಎಂ.ಜಿ. ಈಶ್ವರಪ್ಪ, ಐವನ್ ಡಿಸಿಲ್ವಾ, ಡಿ.ಬಿ.ರಜಿಯಾ, ಅಶೋಕ ಬರಗುಂಡಿ, ಎಲ್. ಹೆಚ್.ಅರಣ್ ಕುಮಾರ್ ಎಚ್.ಎಸ್. ಅನುಪಮಾ ಉಪಸ್ಥಿತರಿರುವರು ಎಂದರು. 

ಮಧ್ಯಾಹ್ನ 2ರಿಂದ ನಡೆಯುವ ಅಭಿವ್ಯಕ್ತಿ ಗೋಷ್ಠಿಯಲ್ಲಿ ಬಂಜಗೆರೆ ಜಯಪ್ರಕಾಶ್, ಚೇತನ್ ಅಹಿಂಸಾ, ಗಂಗಾಧರ ಪತ್ತಾರ, ಹೆಗ್ಗೆರೆ ರಂಗಪ್ಪ, ಎಚ್.ವಿಶ್ವನಾಥ್,  ಶೇಖಣ್ಣ ಕವಳಿಕಾಯಿ, ಸಿಕಂದರ ಅಲಿ, ಎಂ.ಗುರುಸಿದ್ದಸ್ವಾಮಿ ಪಾಲ್ಗೊಳ್ಳುವರು. 

ಮಧ್ಯಾಹ್ನ 3.15ರ ಗ್ರಾಮಭಾರತ ಗೋಷ್ಠಿಯಲ್ಲಿ ಕೆ.ಪಿ.ಸುರೇಶ್, ಪ್ರಕಾಶ್ ಕಮ್ಮರಡಿ, ತೇಜಸ್ವಿ ಪಟೇಲ್, ಆವರಗೆರೆ ರುದ್ರಮುನಿ, ಹೊನ್ನೂರು ಮುನಿಯಪ್ಪ, ನಳಿನ ಗೌಡ ಪಾಲ್ಗೊಳ್ಳುವರು.

ನಂತರ ವಿವಿಧ ಗೋಷ್ಟಿಗಳು ನಡೆಯಲಿದ್ದು, 4.30ರಿಂದ ಕಾವ್ಯ ಪ್ರಸ್ತುತಿ, ಸಂಜೆ 6ಕ್ಕೆ ತರುಣ ಭಾರತ ಕುರಿತು ಗೋಷ್ಠಿ ನಡೆಯಲಿದೆ. ರಾತ್ರಿ 7.45ಕ್ಕೆ ರಂಗ ಪ್ರಸ್ತುತಿ, 8.15ಕ್ಕೆ ಕಿಸಾನ್ ಸತ್ಯಾಗ್ರಹ, ರಾತ್ರಿ 10ರಿಂದ ಹೊನಲು ಬೆಳಕಿನ ಕವಿಗೋಷ್ಟಿ ನಡೆಯಲಿವೆ ಎಂದು ಮಾಹಿತಿ ನೀಡಿದರು. ಮೇ 28ರಂದು ಬೆಳಗ್ಗೆ 8.30ಕ್ಕೆ ಕವಿಗೋಷ್ಟಿ, 10.30ಕ್ಕೆ ಬಹುತ್ವ ಭಾರತ, ಮಧ್ಯಾಹ್ನ 12.30ಕ್ಕೆ ಮಹಿಳಾ ಭಾರತ, 3ಕ್ಕೆ ಅನುಭವ ಕಥನ ಕುರಿತು ಗೋಷ್ಠಿಗಳು ಜರುಗಲಿವೆ.

ಮುಂಬೈನ ಸುಧೀಂದ್ರ ಕುಲಕರ್ಣಿ, ಚಂದ್ರಶೇಖರ ಗೋರೆಬಾಳ, ಮೀನಾಕ್ಷಿ ಬಾಳಿ, ನಬಿಸಾಬ್ ಕಿಲ್ಲೇದಾರ್, ನೂರ್ ಶ್ರೀಧರ್ ಮತ್ತಿತರರು ಗೋಷ್ಠಿಗಳಲ್ಲಿ ಪಾಲ್ಗೊಳ್ಳುವರು. 

ಸಂಜೆ 5 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಬಸವರಾಜ ಹೂಗಾರ ಪ್ರಾಸ್ತಾವಿಕ ನುಡಿಗಳನ್ನಾಡುವರು. ಮೂಡ್ನಾಕೂಡು ಚಿನ್ನಸ್ವಾಮಿ ಪ್ರಶಸ್ತಿ ಪ್ರದಾನ ಮಾಡುವರು. ಸಾಹಿತಿ ಕುಂ.ವೀರಭದ್ರಪ್ಪ ಸಮಾರೋಪ ಭಾಷಣ ಮಾಡುವರು.

ಸುನಂದಾ ಕಡಮೆ, ಬಿ.ಪೀರ್ ಭಾಷಾ, ಮಹಾಂತೇಶ್ ನವಲಕಲ್, ಅನೀಸ್ ಪಾಷಾ, ಅವರಗೆರೆ ಹೆಚ್.ಜಿ.ಉಮೇಶ್, ಜಬೀನಾ ಖಾನಂ, ಇ.ಬಸವರಾಜ್, ಡಿ.ಬಿ.ಗವಾನಿ, ಕೃಷ್ಣ ನಾಯಕ ಹಿಚ್ಕಡ, ಸಿ.ಗಂಗಾಧರ, ಕಲ್ಪಿತಾ ರಾಣಿ ಅಗಮಿಸುವರು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಅನೀಸ್ ಪಾಷಾ, ಎಲ್.ಹೆಚ್.ಅರುಣ್ ಕುಮಾರ್, ಹೆಚ್.ಜಿ.ಉಮೇಶ್, ಆವರಗೆರೆ ರುದ್ರಮುನಿ, ಹೆಗ್ಗೆರೆ ರಂಗಪ್ಪ, ಗುಂಡಗತ್ತಿ ರಾಜಶೇಖರ, ಬುರುಡೇಕಟ್ಟೆ ಮಂಜಪ್ಪ, ಜಬೀನಾ ಖಾನಂ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News