ಕೊಡಗು: ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ಮೃತ್ಯು

Update: 2022-05-21 17:45 GMT

ಸಿದ್ದಾಪುರ (ಕೊಡಗು), ಮೆ 21: ಗೆಳೆಯರೊಂದಿಗೆ ಫಾಲ್ಸ್ ಗೆ ತೆರಳಿದ್ದ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಕೊಡಗಿನ ಪೆರೂರು ಎಂಬಲ್ಲಿ ಶನಿವಾರ ಸಂಜೆ ನಡೆದಿದೆ.

ಕೊಟ್ಟಮುಡಿಯ ಹಾರಿಸ್ ಹಾಗೂ ಫೌಝಿಯ ದಂಪತಿಗಳ ಪುತ್ರ ಮರ್ಕಝ್ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಅಫ್ಸಲ್ (16) ಮೃತ ವಿದ್ಯಾರ್ಥಿ.

ಒಟ್ಟು ಒಂಬತ್ತು ಮಂದಿ ಫಾಲ್ಸ್ ಗೆ ತೆರಳಿದ್ದು, ಅಫ್ಸಲ್ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News