'ನಿಂಬೆಹಣ್ಣು ಹಿಡಿದು ನೃತ್ಯ ಮಾಡುವುದರಲ್ಲಿ ಹೆಚ್ಚು ಆಸಕ್ತಿ': ಸಚಿವ ಎಂಟಿಬಿ ನಾಗರಾಜ್ ವಿರುದ್ಧ ಕಾಂಗ್ರೆಸ್ ಟೀಕೆ

Update: 2022-05-22 13:07 GMT

ಬೆಂಗಳೂರು: 'ನಿಂಬೆಹಣ್ಣು ಹಿಡಿದು ಡ್ಯಾನ್ಸ್ ಮಾಡುವುದರಲ್ಲಿ ಇರುವ ಆಸಕ್ತಿ ಜನರ ಕಷ್ಟಕ್ಕೆ ಸ್ಪಂದಿಸುವುದರಲ್ಲಿ ಇಲ್ಲವಲ್ಲ' ಎಂದು ಪೌರಾಡಳಿತ ಸಚಿವ ಎಂ.ಟಿ.ಬಿ. ನಾಗರಾಜ್ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ಈ ಕುರಿತು ರವಿವಾರ ಟ್ವೀಟ್ ಮಾಡಿರುವ ಕಾಂಗ್ರೆಸ್,  ''ಒಬ್ಬ ಜನಪ್ರತಿನಿಧಿಯಾಗಿ ನಿಂಬೆಹಣ್ಣು ಹಿಡಿದು ನೃತ್ಯ ಮಾಡುವುದರಲ್ಲಿ ಇರುವ ಆಸಕ್ತಿ ತನ್ನ ಕ್ಷೇತ್ರದ ರೈತಬಾಂಧವರು ಅನುಭವಿಸುತ್ತಿರುವ ನೋವುಗಳನ್ನು ನಿವಾರಿಸಿ ಅವರ ಕಷ್ಟಕ್ಕೆ ಸ್ಪಂದಿಸು ವುದರಲ್ಲಿ ಇಲ್ಲವಲ್ಲ ಮಿಸ್ಟರ್ ನಾಗರಾಜ್ ಅವರೇ ಇದೇನಾ ನಿಮ್ಮ ರೈತ ಪ್ರೀತಿ ರೈತಪರ ನಿಲುವು ಬಿಜೆಪಿಗರೇ?'' ಎಂದು ಪ್ರಶ್ನಿಸಿದೆ. 

''ಬಿಜೆಪಿ ಮಾಜಿ ಶಾಸಕರ ಬಾಯಿಯಲ್ಲೇ ಬಿಜೆಪಿಯ ಅನೈತಿಕತೆ, ಅಕ್ರಮ ರಾಜಕಾರಣದ ಕೊಳಕು ಕೃತ್ಯ ಬಯಲಾಗಿದೆ. ಬಿಜೆಪಿ ಇಂದಿಗೂ ನಡೆಸಿಕೊಂಡು ಬಂದಿರುವ ಕಳ್ಳ ಮತಗಳ ಪ್ರಜಾಪ್ರಭುತ್ವ ವಿರೋಧಿ ಅಪರಾಧದ ಸತ್ಯ ಹೇಳಿದ್ದಾರೆ. ಬೇರೆ ಕ್ಷೇತ್ರದ ಒಬ್ಬೊಬ್ಬ ಕಾರ್ಯಕರ್ತನಿಂದ 10 ಮತಗಳನ್ನು ಹಾಕಿಸಿದ ಕುಕೃತ್ಯಕ್ಕೆ ರಾಜ್ಯ ಬಿಜೆಪಿ ಜನತೆಯ ಕ್ಷಮೆ ಕೇಳಬೇಕು'' ಎಂದು ಕಾಂಗ್ರೆಸ್ ಇನ್ನೊಂದು ಟ್ವೀಟ್ ನಲ್ಲಿ ಒತ್ತಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News