ಜೀವನ್ಮುಖಿ ಪ್ರಶಸ್ತಿಗೆ ಗೊ.ರು.ಚನ್ನಬಸಪ್ಪ ಸೇರಿ ನಾಲ್ವರು ಆಯ್ಕೆ

Update: 2022-05-22 15:12 GMT
 ಗೊ.ರು.ಚನ್ನಬಸಪ್ಪ

ಬೆಂಗಳೂರು, ಮೇ 22: ಅಖಿಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆ ವತಿಯಿಂದ ನೀಡುವ 11ನೆ ವರ್ಷದ ಜೀವನ್ಮುಖಿ ಪ್ರಶಸ್ತಿಗೆ ಜನಪದ ತಜ್ಞ ನಾಡೋಜ ಗೊ.ರು.ಚನ್ನಬಸಪ್ಪ, ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತ ಹರೀಶ್ ಪಾಂಡೆ, ಕೇಂದ್ರಿಯ ಸರಕು ಮತ್ತು ಸೇವಾ ತೆರಿಗೆ ಪೂರ್ವ ವಲಯದ ಉಪ ಆಯುಕ್ತ ಡಾ.ಎಸ್.ಶಶಿಕಿರಣ್, ಸಮಾಜ ಸೇವಕ ಬಿ.ಎಂ.ಶಶಿಧರ್ ಆಯ್ಕೆಯಾಗಿದ್ದಾರೆ.

ನಗರದ ನಯನ ಸಭಾಂಗಣದಲ್ಲಿ ಮೇ 29ರಂದು ಪ್ರಶಸ್ತಿ ಪ್ರದಾನ ಸಮಾರಂಭವು ನಡೆಯಲಿದ್ದು, ಕಾರ್ಯಕ್ರಮಕ್ಕೆ ನಿವೃತ್ತ ನ್ಯಾ.ವಿ.ಗೋಪಾಲಗೌಡ, ಸಂಸ್ಕøತಿ ಚಿಂತಕ ಬಿ.ಕೃಷ್ಣಪ್ಪ, ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಟಿ. ತಿಮ್ಮೇಗೌಡ ಉಪಸ್ಥಿತರಿರುತ್ತಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News