ಕೇಂದ್ರ ಸರಕಾರ ಸುಂಕ ಕಡಿತ ಮಾಡಿದರೂ, ರಾಜ್ಯ ಸರಕಾರ ಮಾಡಿಲ್ಲ: ಕುಮಾರಸ್ವಾಮಿ ಆಕ್ರೋಶ

Update: 2022-05-22 15:46 GMT

ಬೆಂಗಳೂರು, ಮೇ 22: ‘ಜನಾಕ್ರೋಶಕ್ಕೆ ಮಣಿದಿರುವ ಕೇಂದ್ರ ಸರಕಾರವು ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಇಳಿಕೆ ಮಾಡಿದೆ. ಹೀಗಾಗಿ ತೈಲ ಬೆಲೆ ದೇಶಾದ್ಯಂತ ಕಡಿಮೆಯಾಗಿದೆ. ಆದರೆ, ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದರೂ ಸುಂಕ ಕಡಿತಕ್ಕೆ ಮೀನಾಮೇಷ ಎಣಿಸುತ್ತಿರುವುದು ಸರಿಯಲ್ಲ' ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಕ್ಷೇಪಿಸಿದ್ದಾರೆ.

ರವಿವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ನೆರೆಯ ಕೇರಳ ರಾಜ್ಯದಲ್ಲಿ ಈಗಾಗಲೇ ಅಬಕಾರಿ ಸುಂಕ ಕಡಿತ ಮಾಡಲಾಗಿದೆ. ಆದರೆ, ರಾಜ್ಯ ಬಿಜೆಪಿ ಸರಕಾರವು ‘ಅಕ್ಕಿ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ' ಎನ್ನುವ ವ್ಯಾಪಾರಿ ಬುದ್ಧಿಯ ಜಾಣ ನಡೆ ಅನುಸರಿಸುತ್ತಿದೆ. ಹಾಗಾಗಿ ತೆರಿಗೆ ಕಡಿತದ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿರುವುದು ಒಪ್ಪುವ ಮಾತಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

‘ಅಧಿಕಾರದಲ್ಲಿ ಇರುವವರಿಗೆ ಅತಿ ಜಾಣತನ ಒಳ್ಳೆಯದಲ್ಲ. ಕೋವಿಡ್ ಸೋಂಕು, ಸತತ ಬೆಲೆ ಏರಿಕೆಯಿಂದ ಹೈರಾಣಾಗಿರುವ ಜನರ ತಾಳ್ಮೆ ಪರೀಕ್ಷೆ ಮಾಡದೆ, ಸುಂಕ ಕಡಿತ ಮಾಡಿ, ತೈಲ ಬೆಲೆ ಪ್ರಹಾರದಿಂದ ಬಸವಳಿದಿರುವ ಜನರಿಗೆ ನೆರವಾಗಬೇಕು ಎಂದು ಕುಮಾರಸ್ವಾಮಿ ಇದೇ ಸಂದರ್ಭದಲ್ಲಿ, ರಾಜ್ಯ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News