ಕರಿ ಟೋಪಿ, ಖಾಕಿ ಚಡ್ಡಿಯಿಂದ ದೇಶ ಉಳ್ಸೋಕಾಗುತ್ತಾ?: ಬಿ.ಕೆ ಹರಿಪ್ರಸಾದ್ ವ್ಯಂಗ್ಯ
Update: 2022-05-22 23:11 IST
ಕಾರವಾರ: 'ದೇಶದ ರಕ್ಷಣೆಗೆ ಸೇನೆ ಇದೆ. ಯಾರೋ ಖಾಕಿ ಚಡ್ಡಿ, ಕರಿ ಟೋಪಿ, ದೊಣ್ಣೆ ಹಿಡಿದುಕೊಂಡು ಬಂದರೆ ಅವರಿಂದ ದೇಶ ಕಾಪಾಡಲಾಗುವುದಿಲ್ಲ' ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿಕೆ ಹರಿಪ್ರಸಾದ್ ಹೇಳಿದ್ದಾರೆ.
ರವಿವಾರ ಕುಮಟಾದಲ್ಲಿ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ''ಕಂಡವರ ಮಕ್ಕಳನ್ನು ಬಾವಿಗೆ ಹಾಕಿ ಆಳ ನೋಡಿದವರು ತಮ್ಮ ಮಕ್ಕಳನ್ನು ವಿದೇಶದಲ್ಲಿ ಓದಿಸುತ್ತಿದ್ದಾರೆ. ಶಿಕ್ಷಣದಲ್ಲಿ ಸಂಪೂರ್ಣ ಕೇಸರಿಕರಣ ಮಾಡಲಾಗುತ್ತಿದೆ. ಹೆಡಗೇವಾರ್ ಅವರನ್ನು ಪಠ್ಯದಲ್ಲಿ ಸೇರಿಸಿ, ನಾರಾಯಣ ಗುರು, ಕುವೆಂಪು ಅವರನ್ನು ಬಿಟ್ಟಿದ್ದಾರೆ'' ಎಂದು ಆರೋಪಿಸಿದರು.
''ನಿಮ್ಮ ಮಕ್ಕಳು ಜೈಲಿಗೆ ಹೋಗೇಕಾದ್ರೆ ಬಿಜೆಪಿಗೆ ಹೋಗಿ. ಬಿಜೆಪಿಯವರು ತಲವಾರು, ಪಿಸ್ತೂಲು ಎಲ್ಲಾ ಕೊಡುತ್ತಾರೆ. ಒಳ್ಳೆಯ ವಿದ್ಯಾಭ್ಯಾಸ ಪಡೆಯಬೇಕಂದ್ರೆ ಕಾಂಗ್ರೆಸ್ ಬೆಂಬಲಿಸಿ'' ಎಂದು ಹೇಳಿದರು.