ಅಭಿಮಾನಿಯ ಮಗುವಿಗೆ ತಮ್ಮದೇ ಹೆಸರನ್ನಿಟ್ಟ ಸಿದ್ದರಾಮಯ್ಯ

Update: 2022-05-22 18:13 GMT

ತುಮಕೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಅಭಿಮಾನಿಯೊಬ್ಬರ ಮಗುವಿಗೆ ತಮ್ಮ ಹೆಸರನ್ನೇ ನಾಮಕರಣ ಮಾಡಿರುವ ಪ್ರಸಂಗವೊಂದು ನಡೆದಿದೆ.

ರವಿವಾರ ತುಮಕೂರಿನ ಬಾಲಭವನದಲ್ಲಿ ನಡೆದ 'ಗ್ರಂಥಾವಲೋಕನ ಸಂಕೀರ್ಣ ಸಂವಾದ' ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ತಮ್ಮ ಅಭಿಮಾನಿಯ ಮಗುವಿಗೆ 'ಸಿದ್ದರಾಮಯ್ಯ' ಎಂದು ನಾಮಕರಣ ಮಾಡಿದ್ದಾರೆ.

ಕಾರ್ಯಕ್ರಮಕ್ಕೆ ಕುಟುಂಬ ಸಮೇತ ಆಗಮಿಸಿದ್ದ  ಅಭಿಮಾನಿ  ತಮ್ಮ ಮಗುವಿಗೆ ಸಿದ್ದರಾಮಯ್ಯ ಅವರಿಂದ ನಾಮಕರಣ ಮಾಡಿಸಬೇಕೆಂದು ಮನವಿ ಮಾಡಿಕೊಂಡರು. ಈ ವೇಳೆ ಮನವಿಗೆ ಸ್ಪಂದಿಸಿದ ಸಿದ್ದರಾಮಯ್ಯ, ವೇದಿಕೆಗೆ ಕರೆಸಿ  'ಸಿದ್ದರಾಮಯ್ಯ' ಎಂದು ನಾಮಕರಣ ಮಾಡಿದ್ದಲ್ಲದೆ, 500 ರೂ. ಉಡುಗೊರೆ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News