×
Ad

'ರೋಹಿತ್ ಚಕ್ರತೀರ್ಥ ಪಠ್ಯ ಪುಸ್ತಕ ಸಮಿತಿಯ ಪೋಕರಿ ಅಧ್ಯಕ್ಷ': ಸಚಿವ ಬಿ.ಸಿ ನಾಗೇಶ್ ಗೆ ಕಾಂಗ್ರೆಸ್ ತಿರುಗೇಟು

Update: 2022-05-23 21:39 IST
         ರೋಹಿತ್ ಚಕ್ರತೀರ್ಥ  |   ಬಿ.ಸಿ ನಾಗೇಶ್

ಬೆಂಗಳೂರು: 'ಕುವೆಂಪು ಈ ನಾಡಿಗೆ, ದೇಶಕ್ಕೆ ಮಾತ್ರವಲ್ಲ, ಇಡೀ ಜಗತ್ತಿಗೆ ಸ್ಪೂರ್ತಿಯ ಸೆಲೆಯಾದವರು. ಲೇಖಕರ ಪರಿಚಯದಲ್ಲಿ ಸಂಘ ಸಿದ್ಧಾಂತ ಪ್ರತಿಪಾದಕರನ್ನು ವಿಜೃಂಭಿಸಿ, ರಾಷ್ಟ್ರಕವಿಯನ್ನು ಕೇವಲವಾಗಿ ಬಿಂಬಿಸಿದ ಬಿಜೆಪಿ ತನ್ನ ಆಂತರ್ಯದಲ್ಲಿನ ಕುವೆಂಪು ದ್ವೇಷವನ್ನು ಅನಾವರಣಗೊಳಿಸಿದೆ. ಆರೆಸ್ಸೆಸ್ ನ ಮುಖವಾಣಿ ಪತ್ರಿಕೆಗಳಂತವನ್ನು ಪಠ್ಯಪುಸ್ತಕವೆಂದು ಒಪ್ಪಲಾಗದು' ಎಂದು ಕಾಂಗ್ರೆಸ್ ಹೇಳಿದೆ.

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್,   'ಶಿಕ್ಷಣ ಸಚಿವರೇ, ಪಠ್ಯ ಪುಸ್ತಕ ಸಮಿತಿಯ ಪೋಕರಿ ಅಧ್ಯಕ್ಷನನ್ನು ಸಮರ್ಥಿಸುತ್ತಾ ಸಿಇಟಿ ಪ್ರೊಫೆಸರ್ ಆಗಿದ್ದರು ಎಂದಿದ್ದೀರಿ. ಸಿಇಟಿ ಯುನಿವರ್ಸಿಟಿ ಇದೆಯೇ? ಎಲ್ಲಿದೆ? ಅಥವಾ ವಾಟ್ಸಾಪ್ ಯೂನಿವರ್ಸಿಟಿಯ ರೀತಿ ಅದೂ ನಿಮ್ಮ ಪ್ರೊಪೆಗಂಡಾ ಯುನಿವರ್ಸಿಟಿಯೇ? ಸ್ಪಷ್ಟಪಡಿಸಿ! ಇಲ್ಲದಲ್ಲಿ ಶಿಕ್ಷಣ ಇಲಾಖೆ ಶತಮೂರ್ಖರ ಕೈಯ್ಯಲ್ಲಿದೆ ಎಂದು ಒಪ್ಪಿಕೊಳ್ಳಿ' ಎಂದು ವಾಗ್ದಾಳಿ ನಡೆಸಿದೆ. 

ಟೀಕೆಗಳನ್ನು ಮಾಡುತ್ತಿರುವವರಿಗೆ ರೋಹಿತ್ ಚಕ್ರತೀರ್ಥ ಅವರ ಹಿನ್ನೆಲೆ ಗೊತ್ತಿಲ್ಲ. ಅವರೊಬ್ಬ ಐಐಟಿ-ಸಿಇಟಿ ಪ್ರೊಫೆಸರ್. ಅವರ ಹಿನ್ನೆಲೆ ಏನು ಎಂಬುದನ್ನು ತಿಳಿಯದೆ ಹೇಳಿಕೆಗಳನ್ನು ನೀಡಬಾರದು ಎಂದು ಸಚಿವ ಬಿ.ಸಿ ನಾಗೇಶ್ ಹೇಳಿಕೆ ನೀಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News