VIDEO - ಗುಂಡ್ಲುಪೇಟೆ | ವೀರಶೈವ ಲಿಂಗಾಯತ ಬೊರ್ಡ್ ತೆರವಿಗೆ ಯತ್ನ: ಲಿಂಗಾಯತರ ಪ್ರತಿಭಟನೆ
Update: 2022-05-24 13:01 IST
ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಆಲತ್ತೂರು ಗ್ರಾಮದಲ್ಲಿ ವೀರಶೈವ ಲಿಂಗಾಯತ ಬೀದಿಯಲ್ಲಿ ಹಾಕಿರುವ ವೀರಶೈವ ಲಿಂಗಾಯತ ಬಳಗ ಬೊರ್ಡ್ ತೆರವಿಗೆ ಆಕ್ರೋಶ ಗೊಂಡ ಗ್ರಾಮದ ಲಿಂಗಾಯತರು ಬೋರ್ಡ್ ಮುಂದೆ ಕುಳಿತು ಪ್ರತಿಭಟನೆ ನಡೆಸಿದರು.
ಲಿಂಗಾಯತರ ಬೀದಿಗೆ ಕೆಂಪೇಗೌಡರ ಪ್ಲೆಕ್ಸ್ ಹಾಕಿರಿವುದನ್ನು ಇನ್ನೂ ತೆರವು ಮಾಡಿಲ್ಲ ಆದರು ನಾವು ಮೌನವಾಗಿದ್ದೇವೆ ಆದರೆ ನಮ್ಮ ವೀರಶೈವ ಲಿಂಗಾಯತರ ಬೋರ್ಡ್ ತೆರವಿಗೆ ಉನ್ನಾರ ನಡೆಯುತ್ತಿದೆ ಎಂದು ಪ್ರತಿಭಟನೆ ನಡೆಸಿದರು.
ಈ ವೇಳೆ ಒಕ್ಕಲಿಗರು ಮತ್ತು ಲಿಂಗಾಯತರ ನಡುವೆ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದು, ಪೊಲೀಸರು ಘಟನೆಯನ್ನು ಶಾಂತಗೊಳಿಸಿದ್ದಾರೆ.
ಸ್ಥಳಕ್ಕೆ ಜಿಲ್ಲಾ ವೀರಶೈವ ಮಹಾಸಭೆ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್, ಡಿವೈಎಸ್ಪಿ, ಸರ್ಕಲ್ ಇನ್ಸ್ ಪೆಕ್ಟರ್ ಭೇಟಿ ನೀಡಿದರು