ಆಟೋ ಮೇಲೆ ಉರುಳಿ ಬಿದ್ದ ಮರ: ತಪ್ಪಿದ ಭಾರೀ ಅನಾಹುತ
Update: 2022-05-24 19:13 IST
ಹಾಸನ: ಮೇ,24: ರಸ್ತೆ ಪಕ್ಕದಲ್ಲಿದ್ದ ಭಾರೀ ಗಾತ್ರದ ಮರವೊಂದು ದಿಢೀರ್ ಆಟೋ ಮೇಲೆ ಉರುಳಿ ಬಿದ್ದ ಘಟನೆ ನಗರದ ಕೆ.ಆರ್.ಪುರಂ ನ 3ನೇ ಅಡ್ಡರಸ್ತೆಯಲ್ಲಿ ಇಂದು ಮಧ್ಯಾಹ್ನ ನಡೆದಿದೆ.
ಅದೃಷ್ಟವಶಾತ್ ಜಬೀನಾ ಮತ್ತು ಜುನೈದ್, ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದು, ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.
ಮರ ಬಿದ್ದ ರಭಸಕ್ಕೆ ಆಟೋ ಸಂಪೂರ್ಣ ಜಖಂ ಆಗಿದ್ದು, ಕಾರೊಂದಕ್ಕೆ ಹಾನಿಯಾಗಿದೆ. ಮರ ಬೀಳುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಮೈ ಜುಮ್ಮೆನ್ನಿಸುವಂತಿದೆ.
ತನ್ಯ ಆಸ್ಪತ್ರೆ ಎದುರಿನ ಸ್ಕ್ಯಾನಿಂಗ್ ಸೆಂಟರ್‌ನಲ್ಲಿ ಪರೀಕ್ಷೆ ಮಾಡಿಸಲೆಂದು ಚಿಕ್ಕಮಗಳೂರಿನಿಂದ ಆಟೋದಲ್ಲಿ ಹಾಸನಕ್ಕೆ ಆಗಮಿಸಿದ್ದರು. ಆಸ್ಪತ್ರೆ ಯಲ್ಲಿ ರಶೀದಿ ಪಡೆದು ಸ್ಕ್ಯಾನಿಂಗ್ ಸೆಂಟರ್ ಎದುರು ಸರತಿಗಾಗಿ ಕಾದು ಕುಳಿತಿರುವಾಗ ಈ ಘಟನೆ ಸಂಬವಿಸಿದೆ.
ಜುನೈದ್ ಕಾಲಿಗೆ ಪೆಟ್ಟು ಬಿದ್ದು, ನಗರದ ಹಿಮ್ಸ್ ಆಸ್ಪತ್ರೆ ಯಲ್ಲಿ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.