ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ವಿಳಾಸವಿಲ್ಲದ 40 ಸಾವಿರ ಮತದಾರರ ನೋಂದಣಿ: ಆರೋಪ

Update: 2022-05-24 17:36 GMT
ಸಾಂದರ್ಭಿಕ ಚಿತ್ರ

ಮೈಸೂರು,ಮೇ.24: ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ  ವಿಳಾಸವೇ ಗೊತ್ತಿಲ್ಲದ ಸುಮಾರು 40  ಸಾವಿರ ಮತದಾರರ ನೋಂದಣಿಯಾಗಿದ್ದು, ಈ ಕೂಡಲೇ ಚುನವಣಾಧಿಕಾರಿಗಳು ಪರಿಶೀಲಿಸಿ ಇವರುಗಳ ವಿಳಾಸ  ಪತ್ತೆ ಹಚ್ವಿ ನಂತರ ಚುನಾವಣೆ ನಡೆಸಬೇಕು ಇಲ್ಲದಿದ್ದರೆ ಹೈಕೋರ್ಟ್‍ನಲ್ಲಿ ತಡೆಯಾಜ್ಞೆ ತರಬೇಕಾಗುತ್ತದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಲಕ್ಷ್ಮಣ್  ಚುನಾವಣಾ ಅಯೋಗಕ್ಕೆ ಎಚ್ಚರಿಕೆ ನೀಡಿದರು.

ನಗರದ ಕಾಂಗ್ರೆಸ್ ಭವನದಲ್ಲಿ  ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಜೂನ್. 13 ರಂದು ದಕ್ಷಿಣ ಪದವೀಧರ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ. ಈ ಸಂಬಂಧ  ಪ್ರಾದೇಶಿಕ ಆಯುಕ್ತರು ಆದ ಚುನಾವಣಾಧಿಕಾರಗಳೆ ಸುಮಾರು 40 ಸಾವಿರ ವಿಳಾಸವಿಲ್ಲದವರು  ನೋಂದಣಿಯಾಗಿದ್ದಾರೆ ಎಂದು ಹೇಳಿದ್ದಾರೆ. ಹಾಗದರೆ ಇವರುಗಳು ಯಾರು ಎಂಬುದನ್ನು ಪತ್ತೆಹಚ್ಚಬೇಕು,  ಚುನಾವಣಾಧಿಕಾರಿಗಳು ಈ ಬಗ್ಗೆ ಪರಿಶೀಲಿಸಬೇಕು, ಇಲ್ಲದಿದ್ದರೆ ಚುನಾವಣೆಯನ್ನೇ ಮಯಂದೂಡಬೇಕು ಎಂದು ಆಗ್ರಹಿಸಿದರು.

ಬೋಗಸ್ ಮತದಾರರನ್ನು ಸೃಷ್ಟಿಸುವಲ್ಲಿ ಬಿಜೆಪಿಯವರು ಮೊದಲ ಸ್ಥಾನ ಪಡೆದರೆ ಜೆಡಿಎಸ್ ನವರು ಎರಡನೇ ಸ್ಥಾನದಲ್ಲಿದ್ದಾರೆ. ಹಾಗಾಗಿ ವಿಳಾಸ ಇಲ್ಲದ  ಇಲ್ಲದ 40 ಸಾವಿರ ಮತದಾರರು ಇವರಕಡೆಯವರೆ ಇರಬಹುದು ಎಂಬ  ಅನುಮಾನ ವ್ಯಕ್ತವಾಗುತ್ತಿದೆ ಎಂದು ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮೈಸೂರಿಗೆ ಭೇಟಿ ನೀಡಿದ್ದ ವೇಳೆ  ಮೈಸೂರು ಮಂಡ್ಯ, ಚಾಮರಾಜನಗರ ಮತ್ತು ಹಾಸನದಲ್ಲಿ ದಕ್ಷಿಣ ಪದವೀಧರ ಕ್ಷೇತ್ರದ ಅಭ್ಯರ್ಥಿ ಗೆಲುವಿಗೆ ಬಿಜೆಪಿ ಪ್ರಯತ್ನಿಸುತ್ತಿದ್ದು,  ಹೊರಗಿನಿಂದ ಬಂದಿರುವ 2 ಸಾವಿರ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ ಎಂಬ ಹೇಳಿಕೆ ನೀಡಿದ್ದಾರೆ. ಹಾಗಾದರೆ ಅವರು ಯಾರು ಎಂಬುದನ್ನು ಸ್ಪಷ್ಟಪಡಿಸಬೇಕು, ಅವರಿಗೆ ಇಲ್ಲಿ ಏನು ಕೆಲಸ ಎಂದು ಪ್ರಶ್ನಿಸಿದರು.

ಈಗಾಗಲೇ ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಹಾಸನ ಒಳಗೊಂಡ ದಕ್ಷಿಣ ಪಧವೀದರ ಕ್ಷೇತ್ರದಲ್ಲಿ 1.33 ಲಕ್ಷ ಪದವೀಧರ ಮತದಾರರ ಮೋಂದಣಿಯಾಗಿರುವುದು ಸಂತಸದ ವಿಷಯ, 2016 ರಲ್ಲಿ ನಡೆದ 1 ಲಕ್ಷ ಮತದಾರರಿದ್ದು ಈ ಬಾರಿ 13 ಸಾವಿರ ಮತದಾರರ ಹೆಚ್ಚಳವಾಗಿದೆ ಎಂದು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ.ಇದರಲ್ಲಿ ವಿಳಾಸವೇ  ಇಲ್ಲದವರು ಯಾರು ಎಂಬುದನ್ನು ಪರಿಶೀಲಿಸಬೇಕಿದೆ. ಅವರ ವಿಳಾಸವನ್ನು ಪತ್ತೆ ಮಾಡಿ ನಂತರ ಚುನಾವಣೆ ನಡೆಸಬೇಕು. ಈ ಬಗ್ಗೆ ಚುನಾವಣಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಗಿದ್ದು, ಜೂನ್.7 ರವರಗೆ ಕಾಲಾವಕಾಶ ನೀಡಲಾಗಿದೆ. ಅಲ್ಲಿವರೆಗೆ ಇದರ ಪರಿಶೀಲನೆಯಾಗದಿದ್ದರೆ ಹೈಕೋಟ್9ನಲ್ಲಿ ತಡೆಯಾಜ್ಞೆ ತರಲು ಕಾಂಗ್ರೆಸ್ ಮುಂದಾಗಲಿದೆ ಎಂದು ಹೇಳಿದರು.

ಇತ್ತೀಚೆಗೆ ಮೈಸೂರಿಗೆ ಬಂದಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಮೈಸೂರಿಗೆ  ಸಿದ್ದರಾಮಯ್ಯ ಅವರ ಕೊಡುಗೆ ಏನು ಎಂಬ ಹೇಳಿಕೆಗೆ ತಿರುಗೇಟು ನೀಡಿ ದಾಖಲೆ ಬಿಡುಗಡೆ ಮಾಡಿದ ಎಂ.ಲಕ್ಷ್ಮಣ್, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ  ಮೈಸೂರು ನಗರಕ್ಕೆ  3850 ಕೋಟಿ ಹಣನೀಡಿ ಹಲವು ಅಭಿವೃದ್ದಿ ಕಾರ್ಯಕೈಗೊಂಡಿದ್ದಾರೆ. ಒಟ್ಟು ಮೈಸೂರು ಜಿಲ್ಲೆಗೆ 22 ಸಾವಿರ ಕೋಟಿ ನಿಡಿದ್ದಾರೆ. ಇದೂವರೆಗೆ ಮೈಸೂರಿಗೆ ಬಿಜೆಪಿ ಕೊಡುಗೆ ಏನು ಎಂಬುದರ ಶ್ವೇತಪತ್ರ ಹೊರಡಿಸಿ ಎಂದು ಒತ್ತಾಯಿಸಿದರು

ಪತ್ರಿಕಾಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಗ್ರಾಮಾಂತರ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಕಾಂಗ್ರೆಸ್ ಮುಖಂಡ ಶಿವಣ್ಣ, ಮಾಧ್ಯಮ ವಕ್ತಾರ ಮಹೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News