×
Ad

ಬಾಗಲಕೋಟೆ ತೋಟಗಾರಿಕೆ ವಿ.ವಿ ಘಟಿಕೋತ್ಸವ: ಚಿನ್ನದ ಪದಕ ಪಡೆದ ಉಮ್ಮೇಸಾರಾ ಅಸ್ಮತ್ ಅಲಿ, ಮೇಘಾ ಅರುಣ್

Update: 2022-05-25 17:00 IST

ಬಾಗಲಕೋಟೆ: ಇಲ್ಲಿನ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 11ನೇ ಘಟಿಕೋತ್ಸವಕ್ಕೆ ಬುಧವಾರ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಚಾಲನೆ ನೀಡಿದರು.

ಸಮಾರಂಭದಲ್ಲಿ ವಿಶ್ವವಿದ್ಯಾಲಯದ ಕುಲಾಧಿಪತಿಯೂ ಆದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್,  680 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು.

ವಿಶ್ವವಿದ್ಯಾಲಯದ ಕುಲಾಧಿಪತಿಯೂ ಆದ ರಾಜ್ಯಪಾಲರು ಸಮಾರಂಭದಲ್ಲಿ 680 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು. ಅವರಲ್ಲಿ 475 ಪದವಿ, 137 ಸ್ನಾತಕೋತ್ತರ ಹಾಗೂ 45 ಪಿಎಚ್ ಡಿ ವಿದ್ಯಾರ್ಥಿಗಳು ಸೇರಿದ್ದಾರೆ.

ಬಿಎಸ್ಸಿ ತೋಟಗಾರಿಕೆ ವಿಷಯದಲ್ಲಿ ಉಮ್ಮೇಸಾರಾ ಅಸ್ಮತ್ ಅಲಿ 16 ಚಿನ್ನದ ಪದಕ ಹಾಗೂ ಎಂಎಸ್ಸಿ ತೋಟಗಾರಿಕೆ ಹಣ್ಣು ವಿಜ್ಞಾನ ವಿಷಯದಲ್ಲಿ ಹಾಸನ ಮೂಲದ ಮೇಘಾ ಅರುಣ್ ನಾಲ್ಕು ಚಿನ್ನದ ಪದಕಗಳ ಪಡೆದಿದ್ದಾರೆ. 

ಉಮ್ಮೇಸಾರಾ, ಮೇಘಾ ಅರುಣ್ ಸೇರಿದಂತೆ ಒಟ್ಟು 18 ಪದವಿ ವಿದ್ಯಾರ್ಥಿಗಳು, 12 ಸ್ನಾತಕೋತ್ತರ ಹಾಗೂ ನಾಲ್ವರು ಪಿಎಚ್ ಡಿ ವಿದ್ಯಾರ್ಥಿಗಳಿಗೆ ರಾಜ್ಯಪಾಲರು ಚಿನ್ನದ ಪದಕ ಪ್ರದಾನ ಮಾಡಿದರು.

ತೋಟಗಾರಿಕೆ ಸಚಿವ ಮುನಿರತ್ನ ಹಾಗೂ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಎಂ.ಇಂದಿರೇಶ್ ಭಾಗವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News