'ನಿರುದ್ಯೋಗಿ ಹಿಂದೂ ಯುವಕರ ಬಗ್ಗೆ ಧ್ವನಿ ಎತ್ತುವುದು ಯಾವಾಗ': ಸಂಘಪರಿವಾರದ ನಾಯಕರಿಗೆ ಪ್ರಿಯಾಂಕ್ ಖರ್ಗೆ ಪ್ರಶ್ನೆ

Update: 2022-05-25 12:17 GMT

ಬೆಂಗಳೂರು: 'ಲಕ್ಷಾಂತರ ಹಿಂದೂ ಕುಟುಂಬಗಳು ಬಡತನಕ್ಕೆ ರೇಖೆಯ ಕೆಳಗೆ ಜಾರಿವೆ, ಲಕ್ಷಾಂತರ ಹಿಂದೂ ಯುವಕರು ಕೆಲಸವಿಲ್ಲದೆ ನಿರುದ್ಯೋಗಿಗಳಾಗಿದ್ದಾರೆ. ಈ ಅನ್ಯಾಯದ ವಿರುದ್ದ ನೀವು ಧ್ವನಿ ಎತ್ತುವುದು ಯಾವಾಗ?'ಎಂದು ಕಾಂಗ್ರೆಸ್ ನಾಯಕ  ಪ್ರಿಯಾಂಕ್ ಖರ್ಗೆ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ನಾಯಕರಿಗೆ ಪ್ರಶ್ನೆ ಮಾಡಿದ್ದಾರೆ.  

ಈ ಕುರಿತು ಬುಧವಾರ ಟ್ವೀಟ್ ಮಾಡಿರುವ ಅವರು, 'ಹಿಂದೂ ಕುಟುಂಬಗಳ ಹಾಗೂ ಯುವಕರ ಭವಿಷ್ಯ ನಿಮಗೆ ಲೆಕ್ಕಕ್ಕಿಲ್ಲವೇ? ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

''ಗ್ರಾಮಗಳು ಶಿಕ್ಷಿತವಾದರೆ ರಾಜ್ಯ ಶಿಕ್ಷಿತವಾಗುತ್ತದೆ, ರಾಜ್ಯ ಶಿಕ್ಷಿತವಾದರೆ ದೇಶ ಸುಶಿಕ್ಷಿತವಾಗುತ್ತದೆ. ಆದರೆ ಶೈಕ್ಷಣಿಕ ಸೌಕರ್ಯ ಒದಗಿಸುವ ಬದಲು ಸಂಘದ ಸೂಚನೆಯಂತೆ ರಾಜಕೀಯ ಸಿದ್ಧಾಂತ ತುಂಬಿಸಲು ಹವಣಿಸುತ್ತಿದೆ ಸರ್ಕಾರ. ಬಿಜೆಪಿಗೆ ಮಕ್ಕಳು ಶಿಕ್ಷಿತರಾಗುವುದಕ್ಕಿಂತ, ಮನುಸ್ಮೃತಿಯ ರೋಬೊಟ್‌ಗಳಾಗಬೇಕಿದೆ'' ಎಂದು ಕಿಡಿಗಾರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News