×
Ad

''ಅಂದು ಕ್ವಿಟ್ ಇಂಡಿಯಾ, ಇಂದು ಕ್ವಿಟ್ ಕಾಂಗ್ರೆಸ್'': ಬಿಜೆಪಿ ಲೇವಡಿ

Update: 2022-05-25 19:41 IST

ಬೆಂಗಳೂರು, ಮೇ 25: ‘ನಮ್ಮ ಪಕ್ಷದ ಬಾಗಿಲು ಸದಾ ತೆರೆದಿರುತ್ತದೆ, ಮತ್ತಷ್ಟು ಜನರು ಬಂದು ಸೇರಲಿದ್ದಾರೆ ಎಂದೆನ್ನುವ ನಾಯಕರೇ ಮೊದಲು ನಿಮ್ಮ ಬಾಗಿಲು ಮುಚ್ಚಿಕೊಳ್ಳಿ. ಬರುವುದಿರಲಿ, ಹೋಗುವವರ ಸಂಖ್ಯೆಯನ್ನೇ ನಿಮ್ಮಿಂದ ತಡೆಯಲು ಸಾಧ್ಯವಾಗುತ್ತಿಲ್ಲ' ಎಂದು ಬಿಜೆಪಿ ಲೇವಡಿ ಮಾಡಿದೆ.

ಬುಧವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಅಂದು ಕ್ವಿಟ್ ಇಂಡಿಯಾ, ಇಂದು ಕ್ವಿಟ್ ಕಾಂಗ್ರೆಸ್. ಕಾಂಗ್ರೆಸ್ ಪಕ್ಷದಲ್ಲಿ ಎಲ್ಲಿಯವರೆಗೂ ನಕಲಿ ಗಾಂಧಿ ಕುಟುಂಬದ ಪಾದ ಪೂಜೆ ನಡೆಯುತ್ತದೆಯೋ ಅಲ್ಲಿಯವರೆಗೆ ಇದೆಲ್ಲಾ ಸಾಮಾನ್ಯ' ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಕಾಂಗ್ರೆಸ್ ಚಿಂತನಾ ಶಿಬಿರದಲ್ಲಿ ‘ಭಾರತ್ ಜೋಡೋ ಅಭಿಯಾನ'ದ ಸಂಕಲ್ಪ ಮಾಡಿದರು. ಇದು ಭಾರತ್ ಜೋಡೋ ಅಲ್ಲ, ‘ಕಾಂಗ್ರೆಸ್ ಛೋಡೋ ಯಾತ್ರೆ' ಎಂದು ನಾವು ವಿಶ್ಲೇಷಿಸಿದ್ದೆವು ಎಂದು ಟೀಕಿಸಿದೆ. ಇದೇ ವೇಳೆ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಕಪಿಲ್ ಸಿಬಲ್ ಅವರು ಪಕ್ಷ ತೊರೆದು ಸಮಾಜವಾದಿ ಪಕ್ಷ ಸೇರ್ಪಡೆ ಕುರಿತು ಉಲ್ಲೇಖಿಸಿರುವ ಬಿಜೆಪಿ, ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News