ಹಿಂದಿನ ಪಠ್ಯವನ್ನೇ ಮುಂದುವರಿಸುವಂತೆ ಸುತ್ತೋಲೆ ಹೊರಡಿಸಿ: ಸಿಎಂ ಬೊಮ್ಮಾಯಿಗೆ ಸಾಹಿತಿ ಹಂಪನಾ ಪತ್ರ

Update: 2022-05-25 15:42 GMT

ಬೆಂಗಳೂರು, ಮೇ 25: ಶಾಲೆಗಳು ಆರಂಭವಾಗಿದ್ದು, ಪಠ್ಯಪರಿಷ್ಕರಣೆಯ ವಿವಾದದ ಚಕ್ರತೀರ್ಥದಲ್ಲಿ ಒದ್ದಾಡುತ್ತಾ ಸರಕಾರವನ್ನು ಪೇಚಿಗೆ ಸಿಲುಕಿಸಿದೆ. ಹಾಗಾಗಿ ಭಿನ್ನಾಭಿಪ್ರಾಯಗಳು ತಾರ್ಕಿಕ ಅಂತ್ಯವನ್ನು ಕಾಣುವವರೆಗೆ ಹೊಸಪಠ್ಯವನ್ನು ತಡೆಹಿಡಿದು, ಹಿಂದಿನ ಪಠ್ಯವನ್ನು ಮುಂದುವರಿಸುವಂತೆ ಸರಕಾರ ಸುತ್ತೋಲೆ ಹೊರಡಿಸಬೇಕು ಎಂದು ಹಿರಿಯ ಸಂಶೋಧಕ ಹಾಗೂ ಸಾಹಿತಿ ಸಾಹಿತಿ ಹಂ.ಪ.ನಾಗರಾಜಯ್ಯ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿದ್ದಾರೆ. 

ವವಿವಾದಿತ ಪಠ್ಯಪರಿಷ್ಕರಣೆಯು ವಿದ್ಯಾರ್ಥಿಗಳಲ್ಲಿ, ಪೋಷಕರಲ್ಲಿ, ತಳಮಳ ಉಂಟು ಮಾಡಿದೆ. ವ್ಯಕ್ತಿಗಳನ್ನು ಅನಗತ್ಯವಾಗಿ ನಿಂದಿಸುವ ಅಪಾಯಕಾರಿ ಪ್ರವೃತ್ತಿ ಹಬ್ಬುತ್ತಿದ್ದು, ಕವಿ ಕುವೆಂಪು ಅವರನ್ನು ಅವಮಾನಗೊಳಿಸಿರುವ ಬರಹಗಳು ಹರಿದಾಡುತ್ತಿವೆ. ಶಿಕ್ಷಣದಲ್ಲಿ ಆಗುತ್ತಿರುವ ಈ ಅನಾರೋಗ್ಯಕರ ಚರ್ಚೆಗಳಿಗೆ ಸರಕಾರ ಕಾರ್ಯಪ್ರವೃತ್ತವಾಗಬೇಕುವ ಎಂದು ಅವರು ಒತ್ತಾಯಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News