ಹೈಕೋರ್ಟ್: ಇಬ್ಬರು ವಕೀಲರಿಗೆ ‘ಹಿರಿಯ ವಕೀಲ’ ಪದವಿ

Update: 2022-05-25 17:57 GMT

ಬೆಂಗಳೂರು, ಮೇ 25: ವಕೀಲರಾದ ಎಸ್.ಎನ್.ಅಶ್ವಥನಾರಾಯಣ್ ಮತ್ತು ಎಂ.ಎಸ್.ಶ್ಯಾಮಸುಂದರ್ ಅವರಿಗೆ ‘ಹಿರಿಯ ವಕೀಲ’(ಡೆಸಿಗ್ನೇಟೆಡ್ ಸೀನಿಯರ್ ಕೌನ್ಸೆಲ್) ಪದವಿ ನೀಡಿ ಹೈಕೋರ್ಟ್ ಆದೇಶ ಹೊರಡಿಸಿದೆ. 

ಈ ಕುರಿತಂತೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಟಿ.ಜಿ.ಶಿವಶಂಕರೇಗೌಡ ಅಧಿಸೂಚನೆ ಹೊರಡಿಸಿದ್ದು, ವಕೀಲರ ಕಾಯ್ದೆ-1961ರ ಕಲಂ 16 (2) ಹಾಗೂ ಕರ್ನಾಟಕ ಹೈಕೋರ್ಟ್ (ಹಿರಿಯ ವಕೀಲರ ನೇಮಕ) ಅಧಿನಿಯಮ-2018ರ ನಿಯಮ 6(9)ರ ಅನುಸಾರ ಇಬ್ಬರು ವಕೀಲರಿಗೆ ಅವರ ಸೇವಾ ಅನುಭವ ಆಧರಿಸಿ ‘ಹಿರಿಯ ವಕೀಲ’ ಪದವಿ ನೀಡಲಾಗಿದೆ ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News