×
Ad

ಕೋಲಾರ ತಾಲೂಕು ಕಚೇರಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ ರೈತ

Update: 2022-05-26 23:39 IST

ಕೋಲಾರ : ತಾಲೂಕು ಕಚೇರಿಯಲ್ಲಿ ಡೀಸೆಲ್ ಸುರಿದುಕೊಂಡು  ಆತ್ಮಹತ್ಯೆ ಗೆ ಯತ್ನ, ಮಾಡಿದ ಘಟನೆ ಕೋಲಾರ ತಾಲೂಕು ಕಚೇರಿಯಲ್ಲಿ ನಡೆದಿದೆ.

ಕೋಲಾರ ತಾಲೂಕಿನ ಪುರಹಳ್ಳಿ ಗ್ರಾಮದ ನಿವಾಸಿ ನಾರಾಯಣಸ್ವಾಮಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ. 

ಕಳೆದ 6 ತಿಂಗಳ ಹಿಂದೆ ದಾಖಲೆಗಾಗಿ ಲಂಚದ ಹಣ ನೀಡಿದ್ದರು ದಾಖಲೆ ನೀಡದೆ ಸತಾಯಿಸಿದ ಸಿಬ್ಬಂದಿ, ಮುಟೇಶನ್  ದಾಖಲೆ ನೀಡಲು ಸತಾಯಿಸಿದ್ದಾರೆ ಎನ್ನಲಾಗಿದೆ. 6 ತಿಂಗಳಿಂದ ಕಚೇರಿಗೆ ಅಲೆದು ರೋಸಿ ಹೋದ ರೈತ ಅಧಿಕಾರಿಗಳ ಎದುರೇ ಡೀಸೆಲ್ ಸುರಿದುಕೊಂಡು ಅಧಿಕಾರಿಗಳ ವಿರುದ್ದ  ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ತಕ್ಷಣ  ನೀರು ಸುರಿದು ದುರ್ಘಟನೆ ತಪ್ಪಿಸಿದ ಅಧಿಕಾರಿಗಳು,  ಸಾರ್ವಜನಿಕರು ಹಾಗೂ  ಗಲ್ ಪೇಟೆ ಪೊಲೀಸರು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News