''ಪ್ರತಿ ಜೀವವೂ ಅಮೂಲ್ಯ‌'': ಕಲಬುರಗಿಯಲ್ಲಿ ದಲಿತ ಯುವಕನ ಹತ್ಯೆ ಪ್ರಕರಣದ ಕುರಿತು ಯು. ಟಿ ಖಾದರ್ ಪ್ರತಿಕ್ರಿಯೆ

Update: 2022-05-27 13:58 GMT

ಬೆಂಗಳೂರು: ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿಯಲ್ಲಿ ದಲಿತ ಯುವಕ ವಿಜಯಕುಮಾರ್ ಕಾಂಬಳೆ (25) ಹತ್ಯೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ವಿಧಾನಸಭೆ ವಿಪಕ್ಷ ಉಪನಾಯಕ ಯು.ಟಿ ಖಾದರ್ ಪ್ರತಿಕ್ರಿಯಿಸಿದ್ದಾರೆ. 

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ''ಪ್ರತಿ ಜೀವವೂ ಅಮೂಲ್ಯ‌. ಕಲಬುರಗಿಯಲ್ಲಿ  ದಲಿತ ಯುವಕನ ಹತ್ಯೆ ಯನ್ನ ನಾನು ತೀವ್ರವಾಗಿ ಖಂಡಿಸುತ್ತೇನೆ. ಕೊಲೆ ವಿಚಾರದಲ್ಲಿ ದಲಿತ , ಹಿಂದೂ , ಮುಸ್ಲಿಮ್ , ಕ್ರಿಶ್ಚಿಯನ್ ಯಾವುದೇ ಧರ್ಮದ ಭೇದಭಾವ ಅಥವಾ ಇತರ ಯಾವುದೇ ಪ್ರಶ್ನೆಯೇ ಇಲ್ಲ. ಸರ್ಕಾರದ ಕೂಡಲೇ ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳ ಬೇಕು'' ಎಂದು ಒತ್ತಾಯಿಸಿದ್ದಾರೆ.

''ಕಿಡಿಗೇಡಿಗಳು ಪದೇ ಪದೇ ಕಾನೂನು ಕೈಗೆತ್ತಿಕೊಳ್ಳುತ್ತಿರುವುದಕ್ಕೆ ಸರ್ಕಾರದ ವೈಫಲ್ಯವೇ ಕಾರಣ. ಕಾನೂನು ಸುವ್ಯವಸ್ಥೆ ಮೇಲೆ ಸರ್ಕಾರಕ್ಕೆ ನಿಯಂತ್ರಣವೇ ಇಲ್ಲ ಎನ್ನಲು ಇದಕ್ಕಿಂತ ಬೇರೆ ಉದಾಹರಣೆ ಏನಿದೆ? ಮೃತ ವಿಜಯ್ ಹಾಗೂ ಆತನ ಕುಟುಂಬಕ್ಕೆ ಸರ್ಕಾರ ನ್ಯಾಯ ಒದಗಿಸಲೇ ಬೇಕು ಎಂಬುದು ನನ್ನ ಒತ್ತಾಯ'' ಎಂದು ತಿಳಿಸಿದ್ದಾರೆ.

ಯುವಕ ವಿಜಯಕುಮಾರ್ ಕಾಂಬಳೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ವಾಡಿ ಪಟ್ಟಣದ ನವಾಝ್ ಮತ್ತು ಮುಹಮ್ಮದ್ ಶಹಾಬುದ್ದೀನ್ ಅನ್ನು ಪೊಲೀಸರು ಬಂಧಿಸಿದ್ದಾರೆ. 

ಇದನ್ನೂ ಓದಿ>> ಕಲಬುರಗಿ: ದಲಿತ ಯುವಕನ ಹತ್ಯೆ; ಇಬ್ಬರು ಆರೋಪಿಗಳ ಬಂಧನ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News