ಕರ್ನಾಟಕದ ಬರಹಗಾರರು, ಕವಿಗಳು ದ್ವೇಷ ಬಿತ್ತುವ ಪ್ರಯತ್ನದ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದಾರೆ: ಪಿ.ಸಾಯಿನಾಥ್

Update: 2022-05-27 14:58 GMT

ದಾವಣಗೆರೆ:  ಕರ್ನಾಟಕದ ಬರಹಗಾರರು ಮತ್ತು ಕವಿಗಳು ಅಭಿವ್ಯಕ್ತಿಯ ಹಕ್ಕಿನ ರಕ್ಷಣೆಗಾಗಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದಾರೆ. ಅವರು ದ್ವೇಷ ಬಿತ್ತುವ ಪ್ರಯತ್ನದ ವಿರುದ್ಧ ಹೋರಾಡುತ್ತಿದ್ದಾರೆ ಎಂದು ಹಿರಿಯ ಪತ್ರಕರ್ತ ಪಿ.ಸಾಯಿನಾಥ್ ಅಭಿಪ್ರಾಯಪಟ್ಟರು.

ನಗರದ ತಾಜ್ ಪ್ಯಾಲೇಸ್‍ನಲ್ಲಿ ನಡೆಯುತ್ತಿರುವ ಮೇ ಸಾಹಿತ್ಯ ಮೇಳದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ಹುಬ್ಬಳ್ಳಿಯ ಕಲ್ಲಂಗಡಿ ವ್ಯಾಪಾರಿ  ನಬೀಸಾಬ್ ಅವರನ್ನು ಕರೆಯಿಸಿ ಘನತೆ ಮತ್ತು ಮಾನವತೆಯನ್ನು ಎತ್ತಿಹಿಡಿಯುವ ಮೂಲಕ ನಮ್ಮೆಲ್ಲರಿಗೂ ಗೌರವ ತಂದಿದ್ದೀರಿ ಎಂದು ಹೇಳಿದರು.

ಈಗ ಇತಿಹಾಸವನ್ನು ಕೋಟ್ಯಂತರ ರೂ.ಗಳನ್ನು ಖರ್ಚುಮಾಡಿ ಮರುಮುದ್ರಿಸಲಾಗುತ್ತಿದೆ. ಅವರ ಇತಿಹಾಸವನ್ನು ಬರೆಯಲಿಕ್ಕಾಗಿ ಪಠ್ಯಗಳನ್ನು ತಿರುಚಲಾಗುತ್ತಿದೆ. 1926ರಲ್ಲಿ ನಿಷೇಧಿಸಲ್ಪಟ್ಟು ನಂತರ 40ರಲ್ಲಿ ಮತ್ತೆ ಪ್ರಕಟಗೊಂಡು ಸಂಘಪರಿವಾರದಿಂದ ಮುಂದೊತ್ತಲ್ಪಟ್ಟ ಸಾವರ್ಕರ್ ಕುರಿತ ಪುಸ್ತಕವೊಂದನ್ನು ಚಿತ್ರಗುಪ್ತ ಎಂಬ ಬರಹಗಾರ ಬರೆದಿದ್ದರು. 1911ರ ವರೆಗೆ ಸಾವರ್ಕರ್ ಅವರು ಕ್ರಾಂತಿಕಾರಿಯಾಗಿದ್ದರು. ಆ ನಂತರ ಜೈಲಿಗೆ ಹೋದ ಮೇಲೆ ಅವರ ಧೋರಣೆ ಬದಲಾಯಿತು ಎಂದು ಹೇಳುತ್ತಾರೆ. ಸಾವರ್ಕರ್ ಬಗ್ಗೆ ಬರೆದಿದ್ದ ಚಿತ್ರಗುಪ್ತ ಎಂಬವರು ಬೇರೆ ಯಾರೂ ಅಲ್ಲ ಸ್ವತಃ ಸಾವರ್ಕರ್ ಅವರೇ ಎಂದು ಅವರ ಸಹೋದರನಿಂದ ನಂತರ ತಿಳಿಯಿತು ಎಂದು ಮಾಹಿತಿ ನೀಡಿದರು.

ಆದಿವಾಸಿ ಮತ್ತು ಗ್ರಾಮೀಣ ಶಿಕ್ಷಣದ ಕತೆ ಏನಾಯಿತು? ನಿಮಗೆ ತನ್ನದೇ ಆದ ಸ್ವಂತ ಸ್ಮಾರ್ಟ್ ಫೋನ್ ಇರುವ ಒಬ್ಬ ದಲಿತ ಆದಿವಾಸಿ ಹುಡುಗಿಯರು ಎಷ್ಟು ಮಂದಿ ಗೊತ್ತಿದಾರೆ? ಸಾಂಖ್ರಾಮಿಕದ 12 ತಿಂಗಳಿನಲ್ಲಿ 102ರಿಂದ 166ಕ್ಕೆ ಡಾಲರ್ ಕೋಟ್ಯಾಧಿಪತಿಗಳ ಸಂಖ್ಯೆ ಹೆಚ್ಚಿತು. ಜಿಡಿಪಿಯ ನಾಲ್ಕು ಪಟ್ಟು ಸಂಪತ್ತು ಜನಸಂಖ್ಯೆಯ ನಾಲಕ್ರಲ್ಲಿ ಒಂದು ಭಾಗ ಇರುವ ಕೋಟ್ಯಾಧಿಪತಿಗಳು ಪ್ರತಿನಿಧಿಸುತ್ತಾರೆ ಎಂದರು.

ಬಂಗಾಳದ ಬರದ ಸಮಯದಲ್ಲಿ, ಜಲಿಯನ್ ವಾಲಾ ಬಾಗ್ ಸಮಯದಲ್ಲಿ ಹೀಗೆ ಇತಿಹಾಸದಲ್ಲಿ ಅನೇಕ ಬಾರಿ ಸತ್ಯವನ್ನು ಹೊರತಂದವರು ಇಂತಹ ಬರಹಗಾರರೇ, ಅವರೇ ತಮ್ಮ ಪತ್ರಿಕೆಗಳನ್ನು ಆರಂಭಿಸಿದರು. ನಬೀಸಾಬ್ ಕಿಲ್ಲೇದಾರ್ ಕಥೆ ಏನು ಎಂಭುದನ್ನು ಹೊರತರಲು ನಿಮ್ಮ ಸೃಜನಶೀಲತೆಯನ್ನು ಬಳಸಬೇಕು. ಈ ಐತಿಹಾಸಿಕ ಜವಾಬ್ದಾರಿಯನ್ನು ಈಡೇರಿಸಲು ಮುಂದಾಗಬೇಕೆಂದು ಕರೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News