ಜನಸಾಮಾನ್ಯರ ಪರಿಷತ್ತಾನ್ನಾಗಿ ಮಾಡಲು ಕಸಾಪ ಅಧ್ಯಕ್ಷರ ವಿನೂತನ ಅಭಿಯಾನ

Update: 2022-05-27 17:50 GMT

ಬೆಂಗಳೂರು, ಮೇ 27: ಕನ್ನಡ ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತನ್ನಾಗಿ ರೂಪಿಸುವ ಉದ್ದೇಶದಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಅವರು ಅಭಿಯಾನವನ್ನು ಪ್ರಾರಂಭಿಸಿ, ಜನಸಾಮಾನ್ಯರ, ಗಣ್ಯರ, ವಿವಿಧ ಕ್ಷೇತ್ರಗಳಲ್ಲಿ ಸಾಧನಗೈದ ಮಹನೀಯರುಗಳ ಮನೆಗೆ ಭೇಟಿ ನೀಡಲಿದ್ದಾರೆ ಎಂದು ಕಸಾಪ ಪ್ರಕಟನೆಯಲ್ಲಿ ತಿಳಿಸಿದೆ.

ಹಾವೇರಿಯಲ್ಲಿ ಆಯೋಜಿಸಲಾಗುತ್ತಿರುವ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನಾಡಿನ ಮೂಲೆ ಮೂಲೆಯಿಂದ ಹಾಗೂ ದೇಶದ ವಿವಿಧ ಭಾಗಗಳಿಂದ, ವಿದೇಶಗಳಿಂದಲೂ ಸೇರಿದಂತೆ ಲಕ್ಷಾಂತರ ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳು ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಸಮ್ಮೇಳನವನ್ನು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸರಕಾರ ಮಾತ್ರ ಆಚರಿಸುವುದಲ್ಲ, ಸಮಸ್ತ ಕನ್ನಡಿಗರೂ ಸೇರಿ ಕನ್ನಡಿಗರ ಹಬ್ಬ ಎಂಬ ಭಾವನೆಯಿಂದ ಆಚರಿಸಬೇಕು. ಹಾಗಾಗಿ ಕನ್ನಡದ ನುಡಿಜಾತ್ರೆಯನ್ನು ಅತ್ಯಂತ ಯಶಸ್ವಿಯಾಗಿ ಆಚರಿಸಲು, ಎಲ್ಲರ ಅಭಿಪ್ರಾಯಗಳು, ಸಲಹೆ-ಸೂಚನೆಗಳನ್ನು ಸ್ವೀಕರಿಸಲು ಹಾಗೂ ಸಹಕಾರವನ್ನು ಪಡೆಯಲು ಸ್ವತಃ ಅಧ್ಯಕ್ಷರೇ ಮನೆ ಮನೆಗೆ ಭೇಟಿ ನೀಡಲಿದ್ದಾರೆ ಎಂದು ತಿಳಿಸಿದೆ

ಆಸಕ್ತ ಕನ್ನಡಾಭಿಮಾನಿಗಳು, ಇಚ್ಛೆಯುಳ್ಳವರು ತಮ್ಮ ಮನೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಆಗಮನಕ್ಕಾಗಿ ಹಾಗೂ ಭೇಟಿಗಾಗಿ ತಮ್ಮ ಹೆಸರು, ಮನೆ ವಿಳಾಸ, ಸಂಪರ್ಕ ದೂರವಾಣಿಯನ್ನು ಜೂನ್ 30ರೊಳಗಾಗಿ, ಗೌರವ ಕಾರ್ಯದರ್ಶಿಗಳು, ಕನ್ನಡ ಸಾಹಿತ್ಯ ಪರಿಷತ್ತು, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು-560018 ಇಲ್ಲಿ ನೋಂದಾಯಿಸಿ ಕೊಳ್ಳಲು ಕೋರಿದೆ.  

ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ 080-26612991, 26623584, 22423867, 26672992, ಇ-ಮೇಲ್ ವಿಳಾಸ kannadaparishattu@gmail.com, , ವೆಬ್‍ಸೈಟ್ www.kasapa.in  ಹಾಗೂ ಯೂಟ್ಯೂಬ್: https://www.youtube.com/c/KannadaParishattu ಕ್ಕೆ ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News