ಮೈಸೂರು ಪಾಲಿಕೆ ಸದಸ್ಯೆ ನಿವಾಸದ ಮೇಲೆ ಇಡಿ ದಾಳಿ
Update: 2022-05-28 23:13 IST
ಮೈಸೂರು,ಮೇ.28: ಕೇಂದ್ರ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮೈಸೂರಿನ 17 ನೇ ವಾಡ್9 ಪಾಲಿಕೆ ಸದಸ್ಯೆ ರೇಶ್ಮಾ ಬಾನು ಮನೆ ಮೇಲೆ ದಾಳಿ ನಡೆಸಿ ಪರಿಶೀಲಿಸುತ್ತಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಪ್ತ ಕೆ.ಜಿ.ಎಫ್. ಬಾಬು ನಿವಾಸದ ಮೇಲೆ ಶನಿವಾರ ಬೆಳಿಗ್ಗೆ ದಾಳಿ ನಡೆಸಿರುವ ಹಿನ್ನಲೆಯಲ್ಲಿ ಮೈಸೂರಿನಿಂದ ನಗರಪಾಲಿಕೆ ಸದಸ್ಯೆ ರೇಶ್ಮಾಬಾನು ಮನೆ ಯಲ್ಲಿ ಕೇಂದ್ರ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶನಿವಾರ ಬೆಳಿಗ್ಗೆಯಿಂದ ಪರಿಶೀಲನೆ ನಡೆಸುತ್ತಿದ್ದಾರೆ.
ಮೈಸೂರಿನ ಬನ್ನಿಮಂಟಪ್ಪ ದಲ್ಲಿರುವ ನಿವಾಸದ ಮೇಲೆ ಇಂದು ಬೆಳಿಗ್ಗೆಯಿಂದಲೇ ದಾಳಿ ನಡೆಸಿ ಕೇಂದ್ರ ಜಾರಿ ನಿರ್ದೇಶಾನಾಲಯದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಮೈಸೂರು ಮಹಾನಗರ ಪಾಲಿಕೆ ಸದಸ್ಯೆ ರೇಶ್ಮಾಬಾನು ಪತಿ ರೆಹಮಾನ್ ಖಾನ್ ಕೆ.ಜಿ.ಎಫ್.ಬಾಬು ಸಂಬಂಧಿಕರಾಗಿದ್ದು, ಈ ಸಂಬಂಧ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.