ಹು-ಧಾ ಪಾಲಿಕೆಯ ಮೇಯರ್ ಆಗಿ ಈರೇಶ, ಉಪಮೇಯರ್ ಆಗಿ ಉಮಾ ಆಯ್ಕೆ

Update: 2022-05-28 18:56 GMT

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಆಯ್ಕೆ ಚುನಾವಣೆಯಲ್ಲಿ ಬಿಜೆಪಿ ಪಾಲಿಕೆಯ ಆಡಳಿತ ಹಿಡಿಯುವಲ್ಲಿ ಯಶಸ್ವಿಯಾಗಿದೆ.

ಚುನಾವಣೆ ಅಧಿಕಾರಿ ಹಾಗೂ ಬೆಳಗಾವಿ ಪ್ರಾದೇಶಿಕ ಆಯುಕ್ತ ಆಮ್ಲಾನ್ ಆದಿತ್ಯ ಬಿಸ್ವಾಸ್ ನೇತೃತ್ವದಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು. ಸದಸ್ಯರು ತಮ್ಮ ಪಕ್ಷದ ಮೇಯರ್ ಹಾಗೂ ಉಪಮೇಯರ್ ಅಭ್ಯರ್ಥಿಗಳ ಪರ ಕೈ ಮತ್ತು ಸಹಿ ಮಾಡುವ ಮೂಲಕ ಬೆಂಬಲ ಸೂಚನೆ ಮಾಡಿದರು.

ಚುನಾವಣೆ ಪ್ರಕ್ರಿಯೆಯಂತೆ ಆಯಾ ಪಕ್ಷಗಳ ಎಲ್ಲ ಸದಸ್ಯರ ಹೆಸರು ನೋಂದಾಯಿಸಿಕೊಂಡು ಅಂತಿಮವಾಗಿ ಬಿಜೆಪಿ ಮೇಯರ್ ಅಭ್ಯರ್ಥಿ ಈರೇಶ ಅಂಚಟಗೇರಿ ಪರವಾಗಿ 50 ಮತಗಳು ವಿರುದ್ದವಾಗಿ 30 ಮತಗಳು ಬಿದ್ದರೇ, ಮೂವರು ತಟಸ್ಥವಾಗಿದ್ದರು. ಇನ್ನೂ ಕಾಂಗ್ರೆಸ್ ಮೇಯರ್ ಅಭ್ಯರ್ಥಿ ಮಯೂರ ಮೊರೆ ಪರ 35, ವಿರುದ್ಧ 51 ಮತಗಳು ಬಿದ್ದರೇ, ತಟಸ್ಥವಾಗಿ ಮೂರು ಜನ ಉಳಿದುಕೊಂಡರು.

ಅದರಂತೆ ಎಐಎಂಐಎಂ ಪಕ್ಷದಿಂದ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ ನಜೀರ್ ಅಹ್ಮದ್ ಹೊನ್ಯಾಳ ಪರವಾಗಿ 3, ವಿರುದ್ಧವಾಗಿ 83 ತಟಸ್ಥವಾಗಿ ಮೂವರು ಮತ ಚಲಾವಣೆ ಮಾಡಿದರು. ಬಳಿಕ ಉಪಮೇಯರ್ ಆಯ್ಕೆಯೂ ಕೂಡಾ ಚುನಾವಣೆ ಪ್ರಕ್ರಿಯೆಯಂತೆ ಕೈ ಎತ್ತಿ ಸಹಿ ಮಾಡುವ ಮೂಲಕ ಆಯ್ಕೆ ಮಾಡಲಾಯಿತು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News