UPSC ಪರೀಕ್ಷೆ: ರಾಜ್ಯದ 27 ಮಂದಿ ಉತ್ತೀರ್ಣ, ವಿವರ ಇಲ್ಲಿದೆ

Update: 2022-05-30 13:48 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 30: ಕೇಂದ್ರ ನಾಗರಿಕ ಸೇವಾ ಆಯೋಗ (ಯುಪಿಎಸ್ಸಿ) 2021ರ ನಾಗರಿಕ ಸೇವೆಗಳ ಪರೀಕ್ಷೆಯ ಅಂತಿಮ ಫಲಿತಾಂಶ ಪ್ರಕಟಗೊಂಡಿದ್ದು, ಒಟ್ಟು 685 ಮಂದಿ ಉತ್ತೀರ್ಣರಾಗಿದ್ದಾರೆ. ಆ ಪೈಕಿ ದಾವಣಗೆರೆ ಜಿಲ್ಲೆಯ ಅವಿನಾಶ್ ವಿ. ಎಂಬುವರು 31ನೆ ರ್‍ಯಾಂಕ್ ಪಡೆಯುವ ಮೂಲಕ ಕರ್ನಾಟಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ಈ ಬಾರಿಯ ಯುಪಿಎಸ್ಸಿ ಪರೀಕ್ಷೆಯಲ್ಲಿ ಕರ್ನಾಟಕದ ಒಟ್ಟು 27 ಮಂದಿ ಉತ್ತೀರ್ಣರಾಗಿದ್ದು ಅದ್ವಿತೀಯ ಸಾಧನೆ ಮಾಡಿದ್ದಾರೆ. ದಾವಣಗೆರೆಯ ಅವಿನಾಶ್ ವಿ. ಅವರು ಮೊದಲ ಪ್ರಯತ್ನದಲ್ಲೇ 31ನೆ ರ್‍ಯಾಂಕ್ ಪಡೆದಿದ್ದು, ದಾವಣಗೆರೆಯ ಜನತಾ ಹೊಟೇಲ್ ಮಾಲಕ ವಿಠ್ಠಲ್ ಅವರ ಪುತ್ರ ಅವಿನಾಶ್ ಸಾಧನೆಗೆ ಕುಟುಂಬಸ್ಥರು ಸೇರಿದಂತೆ ಹಲವು ಮಂದಿ ಅಭಿನಂದಿಸಿದ್ದಾರೆ.

27 ಮಂದಿ ಅಭ್ಯರ್ಥಿಗಳು ಉತ್ತೀರ್ಣ: ಯುಪಿಎಸ್ಸಿ ಪರೀಕ್ಷೆಯಲ್ಲಿ ಒಟ್ಟು ಉತ್ತೀರ್ಣರಾದ 685 ಮಂದಿಯ ಆಪೈಕಿ ಈ ಬಾರಿ ಕರ್ನಾಟಕದ 25 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದು, ದಾವಣಗೆರೆಯ ಅವಿನಾಶ್ 31ನೆ ರ್ಯಾಂಕ್ ಪಡೆದಿದ್ದಾರೆ. ಉಳಿದಂತೆ ಬೆನಕ ಪ್ರಸಾದ್-92, ನಿಖಿಲ್ ಬಿ.ಪಾಟೀಲ್-139, ವಿನಯ್ ಕುಮಾರ್ ಗಾಡಿಗೆ-151, ಚಿತ್ತರಂಜನ್-155, ಕೆ. ಮನೋಜ್ ಕುಮಾರ್-157, ಅಪೂರ್ವ ಬಸೂರ್-191, ನಿತ್ಯಾ-207, ಮಂಜುನಾಥ್-219, ರಾಜೇಶ್  ಪೊನ್ನಪ್ಪ-222, ಸಾಹಿತ್ಯ ಆಲದಕಟ್ಟಿ-150, ಕಲ್ಪಶ್ರೀ-291, ಅರುಣಾ-308, ದೀಪಕ್ ರಾಮಚಂದ್ರ ಶೇಠ್-311, ಹರ್ಷವರ್ಧನ್-318, ವಿನಯ್ ಕುಮಾರ್-352, ಮೇಘನಾ-425, ಸವಿತಾ ಗೋಟ್ಯಾಲ್-479, ಮೊಹಮ್ಮದ್ ಸಿದ್ದಿಕಿ ಶರೀಫ್-516, ಚೇತನ್ ಕೆ.-532, ಎನ್.ಎಸ್.ಪ್ರಕಾಶ್-568, ಪ್ರಶಾಂತ್ ಕುಮಾರ್-641 ಹಾಗೂ ಸುಚಿನ್ ಕೆ.ವಿ.-682ನೆ ರ್ಯಾಂಕ್ ಪಡೆದಿದ್ದಾರೆ.

ಕೇಂದ್ರ ನಾಗರಿಕ ಸೇವಾ ಪರೀಕ್ಷೆ(ಯುಪಿಎಸ್ಸಿ)ಯ ಲಿಖಿತ ಪರೀಕ್ಷೆ2021ರ ಜನವರಿ ತಿಂಗಳಲ್ಲಿ ನಡೆಸಲಾಗಿತ್ತು. ಸಂದರ್ಶನ ಎಪ್ರಿಲ್-ಮೇ ತಿಂಗಳಲ್ಲಿ ನಡೆಸಲಾಗಿತ್ತು. ಈ ಮಹತ್ವದ ಪರೀಕ್ಷೆಯಲ್ಲಿ ಪಾಸ್ ಆಗಿರುವ ಒಟ್ಟು 685 ಅಭ್ಯರ್ಥಿಗಳು ಇದೀಗ ಭಾರತೀಯ ಆಡಳಿತ ಸೇವೆ, ಭಾರತೀಯ ವಿದೇಶಾಂಗ ಸೇವೆ, ಭಾರತೀಯ ಪೊಲೀಸ್ ಸೇವೆ ಮತ್ತು ಕೇಂದ್ರದ ವಿವಿಧ ಸೇವೆ, ಗ್ರೂಪ್ ‘ಎ' ಮತ್ತು ಗ್ರೂಪ್ ‘ಬಿ' ಸ್ಥಾನಕ್ಕಾಗಿ ನೇಮಕ ಆಗಲಿದ್ದಾರೆ.

685 ಮಂದಿ ಅಭ್ಯರ್ಥಿಗಳು ಉತ್ತೀರ್ಣ: ಯುಪಿಎಸ್ಸಿ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾದ 685 ಮಂದಿ ಅಭ್ಯರ್ಥಿಗಳ ಪೈಕಿ ಒಟ್ಟು 244 ಸಾಮಾನ್ಯ ವರ್ಗ, 73 ಮಂದಿ ಆರ್ಥಿಕವಾಗಿ ದುರ್ಬಲ ವರ್ಗ, 203 ಮಂದಿ ಅಭ್ಯರ್ಥಿಗಳು ಇತರೆ ಹಿಂದುಳಿದ ವರ್ಗ(ಒಬಿಸಿ), 105 ಪರಿಶಿಷ್ಟ ಜಾತಿ(ಎಸ್ಸಿ) ಮತ್ತು 60 ಪರಿಶಿಷ್ಟ ಪಂಗಡ(ಎಸ್ಟಿ)ದ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆಂದು ಕೇಂದ್ರ ನಾಗರೀಕ ಸೇವಾ ಆಯೋಗದ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News