''ಪಠ್ಯದಲ್ಲಿ ನನ್ನ ಕವಿತೆ ಕೈಬಿಡಬೇಕು'': ಸಚಿವ ಬಿ.ಸಿ ನಾಗೇಶ್ ಗೆ ಪತ್ರ ಬರೆದ ಪ್ರೊ.ಎಸ್.ಜಿ.ಸಿದ್ದರಾಮಯ್ಯ

Update: 2022-05-30 14:52 GMT

ಬೆಂಗಳೂರು, ಮೇ 30: ಪಠ್ಯಪುಸ್ತಕ ಪರಿಷ್ಕರಣೆ ವಿವಾದದ ಬೆನ್ನಲ್ಲೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹಾಗೂ ಹಿರಿಯ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ತಮ್ಮ ಕವಿತೆ ‘ಮನೆಗೆಲಸದ ಹೆಣ್ಣು ಮಗಳು' 9ನೆ ತರಗತಿಯ ದ್ವಿತೀಯ ಭಾಷಾ ಪದ್ಯವಾಗಿ ಸೇರಿದ್ದು, ಅದನ್ನು ಪಠ್ಯವಾಗಿ ಬೋಧಿಸಲು ಅವರು ನೀಡಿದ್ದ ಅನುಮತಿಯನ್ನು ಹಿಂಪಡೆಯುತ್ತಿದ್ದೇನೆ' ಎಂದು ತಿಳಿಸಿದ್ದಾರೆ.

ಸೋಮವಾರ ಈ ಸಂಬಂಧ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರಿಗೆ ಪತ್ರ ಬರೆದಿರುವ ಪ್ರೊ.ಸಿದ್ದರಾಮಯ್ಯ, ‘ರಾಜ್ಯದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಶಿಕ್ಷಣದ ಮೇಲಿನ ಕೋಮುವಾದಿಕರಣವನ್ನು ನೋಡಿದರೆ ಆತಂಕ ಮತ್ತು ಭಯ ಉಂಟಾಗುವಂತಿದೆ. ಪಠ್ಯ ಪರಿಷ್ಕರಣೆಯ ಅಸಂವಿಧಾನಿಕ ನಡವಳಿಕೆಗಳು ಶೈಕ್ಷಣಿಕ ವಾತಾವರಣದಲ್ಲಿ ಅನಾರೋಗ್ಯಕರ ಬೆಳವಣಿಗೆಗಳಾಗಿವೆ' ಎಂದು ಗಮನ ಸೆಳೆದಿದ್ದಾರೆ.

‘ಕನ್ನಡ ಪರಂಪರೆಗೆ ದುಡಿದ ಮಹನೀಯರಿಗೆ ಧಕ್ಕೆ ಎಸಗುತ್ತಿರುವುದು, ಅಗೌರವ ತೋರಿದ ನಡವಳಿಕೆಯಲ್ಲಿ ಕನ್ನಡ, ಕನ್ನಡಿಗ, ಕರ್ನಾಟಕ ರಾಜ್ಯಕ್ಕೆ ಎಸಗಿದ ದ್ರೋಹ ಕೃತ್ಯವಾಗಿದೆ ಎಂಬುದನ್ನು ತಮ್ಮ ಗಮನಕ್ಕೆ ತರಬಯಸುತ್ತಿದ್ದೇನೆ. ಹೀಗಾಗಿ ನನ್ನ ಕವಿತೆಯನ್ನು ಪಠ್ಯದಿಂದ ಕೈಬಿಡಬೇಕು' ಎಂದು ಪ್ರೊ.ಎಸ್.ಜಿ. ಸಿದ್ದರಾಮಯ್ಯ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News