UPSC ಪರೀಕ್ಷೆ: ಹುಬ್ಬಳ್ಳಿಯ ತಹ್ಸೀನ್ ಬಾನು ದವಡಿ ಗೆ 482ನೇ ರ್‍ಯಾಂಕ್
Update: 2022-05-30 23:27 IST
ಹುಬ್ಬಳ್ಳಿ: ಕೇಂದ್ರೀಯ ಲೋಕಸೇವಾ ಆಯೋಗದ (ಯುಪಿಎಸ್ಸಿ) ನಡೆಸುವ ದೇಶದ ಅತ್ಯುನ್ನತ ನಾಗರೀಕ ಸೇವೆಗಳ ನೇಮಕಕ್ಕೆ 2021 ನೆ ಸಾಲಿನಲ್ಲಿ ನಡೆಸಿದ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೇ ಹುಬ್ಬಳ್ಳಿಯ ತಹ್ಸೀನ್ ಬಾನು ದವಡಿ 482ನೇ ರ್‍ಯಾಂಕ್ ಪಡೆದಿದ್ದಾರೆ.
ಹುಬ್ಬಳ್ಳಿ ನಗರದ ಖಾದರ್ ಬಾಷಾ ಹಾಗೂ ಹಸೀನ ಬೇಗಂ ದಂಪತಿ ಪುತ್ರಿ ತಹ್ಸೀನ್ ಬಾನು ಯುಪಿಎಸ್ಸಿಯಲ್ಲಿ ಉತ್ತೀರ್ಣರಾಗಿರುವ ರಾಜ್ಯದ ಏಕೈಕ ಮುಸ್ಲಿಮ್ ಯುವತಿಯಾಗಿದ್ದಾರೆ.
ಪ್ರಾಥಮಿಕ ಶಿಕ್ಷಣದಂದ ಪಿಯುಸಿವರೆಗೆ ಹುಬ್ಬಳ್ಳಿ ನಗರದಲ್ಲೇ ವ್ಯಾಸಂಗ ಮಾಡಿರುವ ತಹ್ಸೀನ್ ಬಾನು ಬಳಿಕ ಧಾರವಾಡ ಕೃಷಿ ವಿವಿಯಲ್ಲಿ ಬಿಎಸ್ಸಿ ಪದವಿ ಪಡೆದಿದ್ದಾರೆ.
ಜನರ ಸೇವೆ ಮಾಡಬೇಕೆಂಬ ಉದ್ದೇಶದಿಂದ ಯುಪಿಎಸ್ಸಿ ಬರೆದು ಆಯ್ಕೆಯಾದ ಮಗಳ ಸಾಧನೆ ಬಗ್ಗೆ ಪೋಷಕರು ಹಾಗೂ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ... ಈ ಬಾರಿ 23 ಮುಸ್ಲಿಂ ಅಭ್ಯರ್ಥಿಗಳು ಯುಪಿಎಸ್‌ಸಿ ಉತ್ತೀರ್ಣ: ಅರೀಬಾ ನೋಮಾನ್‌ಗೆ 109 ನೇ ರ್ಯಾಂಕ್