ನಾಡಗೀತೆ, ಕುವೆಂಪುಗಿಂತ ಈ ಸರ್ಕಾರಕ್ಕೆ ರೋಹಿತ್ ಚಕ್ರತೀರ್ಥ ಮುಖ್ಯನಾದನೇ?: ಪ್ರಿಯಾಂಕ್ ಖರ್ಗೆ ವಾಗ್ದಾಳಿ

Update: 2022-05-31 09:15 GMT

ಬೆಂಗಳೂರು: 'ನಾಡಿನ ಸಾಹಿತ್ಯಿಕ, ಧಾರ್ಮಿಕ ಕ್ಷೇತ್ರದ ದಿಗ್ಗಜರೆಲ್ಲರೂ ಪರಿಷ್ಕೃತ ಪಠ್ಯಗಳ & ಸಮಿತಿಯ ಅಧ್ಯಕ್ಷನ ನಡವಳಿಕೆಯ ಬಗ್ಗೆ ವಿರೋಧ ವ್ಯಕ್ತಪಡಿಸಿದರೂ ಕ್ರಮ ಕೈಗೊಳ್ಳದಿರುವುದೇಕೆ? ನಾಡಗೀತೆ, ಕುವೆಂಪು ಅವರಿಗಿಂತ ಈತ ಮುಖ್ಯನಾದನೇ?' ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ. 

ಈ ಕುರಿತು ಟ್ವೀಟ್ ಮಾಡಿರುವ ಅವರು, 'ಒಬ್ಬ ನಾಡದ್ರೋಹಿಯ ಮುಂದೆ ಮಂಡಿಯೂರುವಷ್ಟು ರಾಜ್ಯದ ಮುಖ್ಯಮಂತ್ರಿಗಳು ಅಸಹಾಯಕರದರೆ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

'ತರಳಬಾಳು ಶ್ರೀಗಳು ಆದಿಚುಂಚನಗಿರಿ ಶ್ರೀಗಳು, ದೇವನೂರು ಮಹಾದೇವ, ಹಂಪಾ ನಾಗರಾಜಯ್ಯ, ಎಸ್. ಜೆ ಸಿದ್ದರಾಮಯ್ಯ ,ಡಾ.ಜಿ. ರಾಮಕೃಷ್ಣ, ಬರಗೂರು ರಾಮಚಂದ್ರಪ್ಪ ಹಾಗೂ ಇನ್ನಿತರ ಸಾಂಸ್ಕೃತಿಕ ಧಾರ್ಮಿಕ, ಸಾಹಿತ್ಯಿಕ ವಲಯದ ದಿಗ್ಗಜರ ಮಾತಿಗೆ ಹಿಂದಿನ ಎಲ್ಲಾ ಸರ್ಕಾರಗಳೂ ಗೌರವಿಸಿವೆ. ಆದರೆ ಈ ಸರ್ಕಾರಕ್ಕೆ ಆಫ್ಟರಾಲ್ ರೋಹಿತ್ ಚಕ್ರತೀರ್ಥನೇ ದೊಡ್ಡವನಾ? ಎಂದು ಕಿಡಿಗಾರಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News