×
Ad

''10ನೇ ತರಗತಿಯ ಪಠ್ಯದಲ್ಲಿ ನನ್ನ ಲಲಿತ ಪ್ರಬಂಧವನ್ನು ಮುಂದುವರಿಸಬಾರದು'': ಸಚಿವರಿಗೆ ಪತ್ರ ಬರೆದ ಈರಪ್ಪ ಎಂ ಕಂಬಳಿ

Update: 2022-05-31 15:34 IST

ಬೆಂಗಳೂರು: ರೋಹಿತ್‌ ಚಕ್ರತೀರ್ಥ ನೇತೃತ್ವದ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯನ್ನು ವಿರೋಧಿಸಿ ಈ ಹಿಂದೆ ಜಿ.ರಾಮಕೃಷ್ಣ, ಸಿದ್ದರಾಮಯ್ಯ ಹಾಗೂ ದೇವನೂರ ಮಹದೇವ ಹಾಗೂ ಮೂಡ್ನಾಕೂಡು ಚಿನ್ನಾಸ್ವಾಮಿ ಅವರು ತಾವು ನೀಡಿದ್ದ ಅನುಮತಿಯನ್ನು ಹಿಂತೆಗೆದುಕೊಂಡಿದ್ದರು. ಈ ಸಾಲಿಗೆ ಇದೀಗ ಈರಪ್ಪ ಎಂ ಕಂಬಳಿ ಸೇರಿದ್ದಾರೆ.

10ನೇ ತರಗತಿಗೆ ಪಠ್ಯವಾಗಿರುವ ‘ಹೀಗೊಂದು ಟಾಪ್‌ ಪ್ರಯಾಣ‘ ಲಲಿತ ಪ್ರಬಂಧವನ್ನು ಮುಂದುವರಿಸಬಾರದೆಂದು ಈರಪ್ಪ  ಕಂಬಳಿ ಹೇಳಿದ್ದಾರೆ.

ಈ ಕುರಿತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಶಗೇಶ್ ಗೆ ಪತ್ರ ಬರೆದಿರುವ ಈರಪ್ಪ ಎಂ ಕಂಬಳಿ ಅವರು, ಕಳೆದ ಸಾಲಿನಲ್ಲಿ ಹತ್ತನೆ ತರಗತಿಯ ನುಡಿ- ಕನ್ನಡ ತೃತೀಯ ಭಾಷಾ ಕನ್ನಡ ಪಠ್ಯಪುಸ್ತಕದಲ್ಲಿರುವ ಪ್ರಬಂಧವನ್ನು ಮುಂದುವರಿಸಬಾರದು ಎಂದು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News