×
Ad

ಬಸವಣ್ಣನವರ ಪಠ್ಯ ಪರಿಷ್ಕರಣೆ | ಪಠ್ಯದಲ್ಲಿನ ಸಾಲು ನೋಡಿ ಎದೆಗೆ ಕಲ್ಲು ಹೊಡೆದಂತಾಯಿತು: ಬಸವ ಜಯಮೃತ್ಯುಂಜಯ ಶ್ರೀ

Update: 2022-05-31 16:38 IST

ಹುಬ್ಬಳ್ಳಿ: ‘ಪಠ್ಯ ಪುಸ್ತಕದಲ್ಲಿ ಬಸವಣ್ಣನವರ ಬಗ್ಗೆ ಇರುವ ಮಾಹಿತಿ ಪರಿಷ್ಕರಣೆ ಮಾಡಿದ್ದ ಸಾಲನ್ನು ನೋಡಿ ಎದೆಗೆ ಕಲ್ಲು ಹೊಡೆದಂತಾಯ್ತು. ಬಸವಣ್ಣನವರ ತತ್ವಕ್ಕೆ ಅಪಚಾರವಾಗುವ ಕೆಲಸ ಆಗಿದೆ’ ಎಂದು ಕೂಡಲ‌ ಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. 

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ಸೈದ್ಧಾಂತಿಕ ವಿಚಾರಗಳನ್ನು ಗೊಂದಲ ಮಾಡಿ  ದಾರಿ ತಪ್ಪಿಸುವ ಪ್ರಯತ್ನವನ್ನು ಪಠ್ಯ ಪುಸ್ತಕದಲ್ಲಿ ಪ್ರಿಂಟ್ ಆಗಿರುವ ವಿಚಾರವನ್ನು ಕೇಳಿ ನಮ್ಮ ಸಮಾಜಕ್ಕೆ ನೋವಾಗಿದೆ' ಎಂದು ತಿಳಿಸಿದರು.    

ಸೈದ್ಧಾಂತಿಕ ವಿಚಾರಕ್ಕೆ ಕೈ ಹಾಕಬೇಡಿ. ಬಸವಣ್ಣ ಅವರ ತತ್ವ ಸಂದೇಶಗಳನ್ನು ಮಕ್ಕಳಿಗೆ ಬೋಧಿಸಬೇಕು. ಬಸವಣ್ಣನವರ ತತ್ವಗಳ ಬಗ್ಗೆ ದಾರಿ ತಪ್ಪಿಸೋ ಕೆಲಸ ಮಾಡಬೇಡಿ. ಅಸಮಾನತೆ ವಿರುದ್ಧ ಬಸವಣ್ಣ ಅವರ ಹೋರಾಟ ಜಗಜ್ಜಾಹೀರು ಬೊಮ್ಮಾಯಿ ಅವರೇ ನಿಮ್ಮ ತಂದೆ ಬಸವಣ್ಣನ ಭಕ್ತರಾಗಿದ್ದರು. ಅನೇಕ ಪೂಜ್ಯರ ಮಾರ್ಗದರ್ಶನ ನಿಮಗಿದೆ. ಪುಸ್ತಕ ಬಿಡುಗಡೆ ಆಗೋ ಮುಂಚೆ ಲೋಪದೋಷ ಸರಿಪಡಿಸಿ ಎಂದು ಜಯಮೃತ್ಯುಂಜಯ ಸ್ವಾಮೀಜಿ ಒತ್ತಾಯಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News