×
Ad

ಪಿಎಸ್‍ಐ ಅಕ್ರಮ ಪ್ರಕರಣ: ಆರೋಪಿ ಆರ್.ಡಿ.ಪಾಟೀಲ್ ಮತ್ತೆ ಮೂರು ದಿನ ಸಿಐಡಿ ಕಸ್ಟಡಿಗೆ

Update: 2022-05-31 20:55 IST
ಫೈಲ್ ಚಿತ್ರ

ಕಲಬುರಗಿ, ಮೇ 31: ಪಿಎಸ್‍ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಆರ್.ಡಿ.ಪಾಟೀಲನನ್ನು ಮತ್ತೆ ಮೂರು ದಿನ ಸಿಐಡಿ ಕಸ್ಟಡಿಗೆ ನೀಡಿ ಕಲಬುರಗಿ ಜೆಎಂಎಫ್‍ಸಿ ಕೋರ್ಟ್ ಆದೇಶಿಸಿದೆ. 

ಏಳು ದಿನದ ಸಿಐಡಿ ಕಸ್ಟಡಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ನ್ಯಾಯಪೀಠವು ಆರೋಪಿಯನ್ನು ಮತ್ತೆ ಮೂರು ದಿನ ಸಿಐಡಿ ಕಸ್ಟಡಿಗೆ ನೀಡಿ ಆದೇಶಿಸಿದೆ. 

ಆರ್.ಡಿ.ಪಾಟೀಲ್‍ನನ್ನು ನಗರದ ಎಂ.ಎಸ್. ಇರಾಣಿ ಕಾಲೇಜಿನಲ್ಲಿ ನಡೆದ ಪಿಎಸ್‍ಐ ಅಕ್ರಮ ಪ್ರಕರಣದ ಹಿನ್ನೆಲೆ ಎರಡನೇ ಬಾರಿ ಸಿಐಡಿ ಅಧಿಕಾರಿಗಳು ಕಸ್ಟಡಿಗೆ ಪಡೆದಿದ್ದರು. ಇದೀಗ ಮೂರನೇ ಬಾರಿ ಹೆಚ್ಚಿನ ವಿಚಾರಣೆಗೆ ಆರೋಪಿಯನ್ನು ಕಸ್ಟಡಿಗೆ ಪಡೆಯಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News