×
Ad

ಪಠ್ಯದಲ್ಲಿ ತಮ್ಮ‌ ಎರಡು ಬರಹಗಳನ್ನು ಪ್ರಕಟಿಸುವ ಅನುಮತಿ ವಾಪಸ್ ಪಡೆದ ಸಾಹಿತಿ ಎಚ್.ಎಸ್.ಅನುಪಮಾ

Update: 2022-06-01 16:51 IST
ಎಚ್‌.ಎಸ್‌ ಅನುಪಮಾ

ಬೆಂಗಳೂರು: ‘ಶಾಲಾ ಪಠ್ಯಪುಸ್ತಕ ಪರಿಷ್ಕರಣೆ ವಿವಾದ ರಾಜ್ಯದಲ್ಲಿ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇದರ ಬೆನ್ನಲ್ಲೆ ‘ತಮ್ಮ ಕಥೆ, ಕಾವ್ಯ, ಪ್ರಬಂಧ ಬೋಧನೆಗೆ ನೀಡಿದ್ದ ಅನುಮತಿ'ಯನ್ನು ಹಿಂಪಡೆದುಕೊಳ್ಳುವ ಮೂಲಕ ಪಠ್ಯ ಪರಷ್ಕರಣೆ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥರ ವಜಾಕ್ಕೆ ಆಗ್ರಹಿಸಿ ಸರಕಾರದ ವಿರುದ್ಧ ಸಾಹಿತಿಗಳು ಆಕ್ರೋಶ ಮುಂದುವರಿಸಿದ್ದಾರೆ.

ಇದೀಗ 'ಪಠ್ಯ ಕೈಬಿಡಿ' ಅಭಿಯಾನಕ್ಕೆ ಸಾಹಿತಿ ಎಚ್‌.ಎಸ್‌ ಅನುಪಮಾ ಕೂಡ ಸೇರ್ಪಡೆಯಾಗಿದ್ದು, ಈ ಸಂಬಂಧ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೆಶ್ ಅವರಿಗೆ ಪತ್ರ ಬರೆದಿದ್ದಾರೆ. 

''7ನೇ ತರಗತಿಯ (ಪ್ರಥಮ ಭಾಷಾ) ಕನ್ನಡ ಪಠ್ಯ ಪುಸ್ತಕದಲ್ಲಿನ ‘ಸಾವಿತ್ರಿ ಬಾಯಿ ಫುಲೆ‘ ಹಾಗೂ ಅದೇ ತರಗತಿಯ ತೃತೀಯ ಭಾಷಾ ಕನ್ನಡ ಪಠ್ಯ ಪುಸ್ತಕದಲ್ಲಿನ ‘ನೆನವುದೆನ್ನ ಮನ‘ ಗದ್ಯವನ್ನು ಹಿಂಪಡೆಯುತ್ತಿದ್ದೇನೆ'' ಎಂದು ತಿಳಿಸಿದ್ದಾರೆ. 


ಎಚ್‌.ಎಸ್‌ ಅನುಪಮಾ ಅವರು ಸಚಿವ ಬಿ.ಸಿ ನಾಗೆಶ್ ಅವರಿಗೆ ಬರೆದ ಪತ್ರ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News