ಸಚಿವ ಬಿ.ಸಿ ನಾಗೇಶ್ ನಿವಾಸಕ್ಕೆ NSUI ಕಾರ್ಯಕರ್ತರ ಮುತ್ತಿಗೆ | 15 ಮಂದಿ ವಶಕ್ಕೆ: ಆರಗ ಜ್ಞಾನೇಂದ್ರ

Update: 2022-06-01 13:41 GMT

ತುಮಕೂರು.ಜೂ.01:ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿಸಿ ನಾಗೇಶ್ ಮನೆ ಮೇಲೆ ಬುಧವಾರ ತಿಪಟೂರಿನಲ್ಲಿ ಮದ್ಯಾಹ್ನ 3.30ಸಮಯದಲ್ಲಿ ಎನ್.ಎಸ್.ಯು.ಐ ಪದಾಧಿಕಾರಿಗಳು ದಾಂದಲೆ ನಡೆಸಿರುವ ಪ್ರಕರಣಕ್ಕೆ ಪ್ರತಿಕ್ರಿಯಿಸಿರುವ ಗೃಹಸಚಿವ ಅರಗ ಜ್ಞಾನೇಂದ್ರ ಘಟನೆ ಖಂಡನೀಯ ಎಂದಿದ್ದಾರೆ.

ಮದ್ಯಾಹ್ನ 3:30ರ ಸುಮಾರಿಗೆ ಸಚಿವ ಬಿ.ಸಿ ನಾಗೇಶ್ ರವರ ಮನೆ ಮೇಲೆ ದಾಳಿ ನಡೆಸಿರುವ ಕಿಡಿಗೇಡಿಗಳು ಮನೆಗೆ ಬೆಂಕಿ ಹಚ್ಚುವ ಕೆಲಸಕ್ಕೆ ಸಹ ಮುಂದಾಗಿದ್ದಾರೆ ಎಂದು ಕಿಡಿಕಾರಿದರು.ಘಟನೆಯ ಸಂಬಂಧ ಸುಮಾರು 15ಕ್ಕೂ ಹೆಚ್ಚು ಜನರ ಬಂಧನವಾಗಿದ್ದು ಎರಡು ವಾಹನಗಳನ್ನು ಸಹ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.

ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಸರಕಾರ ಇಂತಹ ಗೂಂಡಾ ವರ್ತನೆ ಯನ್ನು ತಡೆಯಲು ಸಾಧ್ಯವಿಲ್ಲ.ಇದಕ್ಕೆ ತಕ್ಕ ಪಾಠವನ್ನು ಅವರು ಕಲಿಯಬೇಕಾಗುತ್ತದೆ.ಇನ್ನು ಕೆಲವರು ಯಾರದೋ ಮನೆಗೆ ನುಗ್ಗುತ್ತೆವೆ.ಎದುರಿಸುತ್ತೆವೆ ಅಂದುಕೊಂಡರೆ ಈ ದೇಶದಲ್ಲಿ ನಡೆಯುವುದಿಲ್ಲ.ಈ ಸಂಬಂಧ ಪೊಲೀಸರು ಕಾನೂನು ಕ್ರಮ ಜರುಗಿಸಲಿದ್ದಾರೆ ಎಂದರು.

ಇನ್ನು ಘಟನೆಯ ಯಾವ ಕಾರಣಕ್ಕಾಗಿ ನಡೆದಿದೆ ಎನ್ನುವುದು ಸದ್ಯಕ್ಕೆ ಮಾಹಿತಿ ಲಭ್ಯವಾಗಿಲ್ಲ ಘಟನಾ ಸ್ಥಳಕ್ಕೆ ತಾವು ಸಹ ಕೂಡಲೇ ಭೇಟಿ ನೀಡಲಿದ್ದೇವೆ.ಬೆಂಗಳೂರಿನಿಂದ ಐದು ಮಂದಿ, ಭದ್ರಾವತಿಯಿಂದ ಒಬ್ಬರು, ತುಮಕೂರಿನಿಂದ ಒಬ್ಬರು ,ಚಿಕ್ಕಮಗಳೂರಿನಿಂದ ಇಬ್ಬರು,ದಾವಣಗೆರೆಯಿಂದ ಮೂವರು,ಹಾಸನದಿಂದ ಮೂರು ಮಂದಿ ಬಂದು ಕೃತ್ಯದಲ್ಲಿ ಭಾಗಿಯಾಗಿರುವ ಸುಮಾರು 15ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.ಇನ್ನು ಘಟನಾ ಸ್ಥಳದಿಂದ ಪರಾರಿಯಾಗಿರುವ ಇತರೆ ಮಂದಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದು,ತಪ್ಪಿಸಿಕೊಂಡಿರುವ ಇತರೆ ಆರೋಪಿಗಳನ್ನು ಪೊಲೀಸರು ಬಂಧಿಸಲಿದ್ದಾರೆ ಎಂದರು.

ಇಡೀ ಘಟನೆಯನ್ನು ಗಮನಿಸಿದಾಗ ಬೇರೆ ಬೇರೆ ಜಿಲ್ಲೆಗಳಿಂದ ಎಲ್ಲರೂ ಸೇರಿ ಒಟ್ಟಿಗೆ ಮನೆ ಮೇಲೆ ದಾಳಿ ನಡೆಸಿರುವುದನ್ನು ಗಮನಿಸಿದರೆ, ಇದು ಪೂರ್ವ ನಿಯೋಜಿತ ಕೃತ್ಯವಾಗಿದೆ ಎಂದು ಘಟನೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸಚಿವರು, ಘಟನೆಗೆ ಪೊಲೀಸ್ ವೈಫಲ್ಯ ಕಾರಣವಲ್ಲ.ಘಟನೆ ನಡೆದಾಗ ಮನೆಯಲ್ಲಿ ಸಚಿವರ ಮಗ ಹಾಗೂ ಅವರ ಆಪ್ತ ಸಹಾಯಕ ಮಾತ್ರ ಇರುವ ಕಾರಣ ಯಾರಿಗೂ ತೊಂದರೆಯಾಗಿಲ್ಲ.ರಾಜ್ಯದಲ್ಲಿ ಗುಪ್ತಚರ ಇಲಾಖೆಯ ವೈಫಲ್ಯ ಕಂಡಿಲ್ಲ ಪೊಲೀಸರು ಸಹ ಎಚ್ಚರದಿಂದ ಇದ್ದಾರೆ.ಘಟನೆ ಏಕಾಏಕಿ ನಡೆದಿದೆ. ಇನ್ನೂ ಘಟನೆಯ ಹಿಂದೆ ಕಾಂಗ್ರೆಸ್ ಇದ್ದು ಎನ್.ಎಸ್. ಯು ಐ ಕಾಂಗ್ರೆಸ್ ನ  ಮತ್ತೊಂದು ಭಾಗವಾಗಿದೆ ಎಂದರು.

ಘಟನೆಯಲ್ಲಿ ಎನ್.ಎಸ್.ಯು.ಐ ನ ರಾಜ್ಯ ಅಧ್ಯಕ್ಷ ಉಪಾಧ್ಯಕ್ಷ ಸೇರಿದಂತೆ ಹಲವರು ಕೃತ್ಯದಲ್ಲಿ ಭಾಗಿಯಾಗಿರುವ ವ್ಯಕ್ತಿಗಳನ್ನು ಬಂಧಿಸಲಾಗಿದೆ.ಶೀಘ್ರದಲ್ಲಿಯೇ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಅರಗಜ್ಞಾನೇಂದ್ರ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News