ಅಪ್ರಿಯವಾದ ವರದಿ ಪ್ರಕಟಿಸದಂತೆ ತಡೆಯಾಜ್ಞೆ ಕೋರಿ ಮುರುಘಾ ಶರಣರಿಂದ ಕೋರ್ಟ್‍ಗೆ ಅಸಲುದಾವೆ ಸಲ್ಲಿಕೆ

Update: 2022-06-01 16:39 GMT

ಬೆಂಗಳೂರು, ಜೂ.1: ಮುರುಘರಾಜೇಂದ್ರ ಮಠಕ್ಕೆ ಸಂಬಂಧಿಸಿದಂತೆ ಅಪ್ರಿಯವಾದ ವರದಿಗಳನ್ನು ಪ್ರಕಟಿಸಬಾರದು ಹಾಗೂ ಯಾವುದೇ ರೀತಿಯ ಚರ್ಚೆಗಳನ್ನು ನಡೆಸಬಾರದೆಂದು ನಿರ್ದಿಷ್ಟ ಪ್ರಕರಣ ಉಲ್ಲೇಖಿಸದೆ ತಡೆಯಾಜ್ಞೆ ಕೋರಿ ಚಿತ್ರದುರ್ಗ ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರು, ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್‍ಗೆ ಅಸಲು ದಾವೆ ಸಲ್ಲಿಸಿದ್ದಾರೆ. 

ಮಠದ ಮೂಲಕ ಅಸಲು ದಾವೆಯನ್ನು ಸಲ್ಲಿಸಿಲ್ಲ, ಮುರುಘಾ ಶರಣರೇ ದಾವೆಯನ್ನು ಸಲ್ಲಿಸಿದ್ದಾರೆ. ಡಿಜಿಟಲ್ ಮಾಧ್ಯಮ, ಟ್ವಿಟರ್, ಫೇಸ್‍ಬುಕ್‍ಗಳನ್ನು ಹೊರತುಪಡಿಸಿ, ಮುದ್ರಣ ಮಾಧ್ಯಮ, ಟಿವಿ ಮಾಧ್ಯಮಗಳನ್ನು ಅರ್ಜಿಯಲ್ಲಿ ಪ್ರತಿವಾದಿಯನ್ನಾಗಿ ಮಾಡಲಾಗಿದೆ.

ಸಾಮಾಜಿಕ ಮಾಧ್ಯಮಗಳು ಮಾನಹಾನಿಕರ ಸ್ವರೂಪದಲ್ಲಿವೆ. ಪಿರ್ಯಾದಿಯ ವರ್ಚಸ್ಸನ್ನು ಹಾಳುಗೆಡವಲು ಯತ್ನಿಸುತ್ತಿವೆ ಎಂದು ಅಸಲು ದಾವೆಯಲ್ಲಿ ಉಲ್ಲೇಖಿಸಲಾಗಿದೆ. ಈ ಅರ್ಜಿಯು ಮಠದ ಮುಖ್ಯಸ್ಥರಿಗೆ ಸಂಬಂಧಿಸಿದ ಯಾವುದೇ ವರದಿಯ ಮೇಲೆ ಸಂಪೂರ್ಣ ನಿಷೇಧವನ್ನು ಕೋರುತ್ತದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News