ಯುಪಿಎಸ್ಸಿ ಪರೀಕ್ಷೆಯಲ್ಲಿ ಸಹಕಾರ ಇಲಾಖೆ ಅಧಿಕಾರಿಗೆ 151 ನೇ ರ್‍ಯಾಂಕ್; ಸಚಿವ ಎಸ್.ಟಿ.ಸೋಮಶೇಖರ್ ರಿಂದ ಅಭಿನಂದನೆ

Update: 2022-06-01 17:10 GMT

ಬೆಂಗಳೂರು, ಜೂ.1: ಕೇಂದ್ರದ ನಾಗರಿಕ ಸೇವಾ ಪರೀಕ್ಷೆಯಲ್ಲಿ 151ನೇ ರ್‍ಯಾಂಕಿನನಲ್ಲಿ ತೇರ್ಗಡೆ ಹೊಂದಿರುವ ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆಯ ಸಹಾಯಕ ನಿರ್ದೇಶಕ ವಿನಯ್ ಕುಮಾರ್ ಗಾದಗೆ ಅವರನ್ನು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಬುಧವಾರ ಅಭಿನಂದಿಸಿದರು.  

ಮೂಲತಃ ಬೀದರ್ ನಗರದವರಾದ ವಿನಯ್ ಕುಮಾರ್ ಅವರು ಎಂ.ಬಿ.ಬಿ.ಎಸ್. ಪದವೀಧರರು. 2019ರ ಕರ್ನಾಟಕದ ನಾಗರಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ ಬೆಂಗಳೂರಿನಲ್ಲಿ ಈಗಾಗಲೇ ಸೇವೆ ಸಲ್ಲಿಸುತ್ತಿದ್ದಾರೆ. 

ನಾಗರಿಕ ಸೇವೆಯಲ್ಲಿ ಇನ್ನೂ ಹೆಚ್ಚಿನ ಯಶಸ್ಸು, ಉನ್ನತ ಸ್ಥಾನಮಾನ ಸಿಗಲಿ ಎಂದು ಸೋಮಶೇಖರ್ ಇದೇ ಸಂದರ್ಭದಲ್ಲಿ ಶುಭ ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News