×
Ad

ಕಲಬುರಗಿ: ಅಪಘಾತಗೊಂಡ ಬಸ್‌ ನಲ್ಲಿ ಬೆಂಕಿ; 7 ಮಂದಿ ಪ್ರಯಾಣಿಕರು ಮೃತ್ಯು

Update: 2022-06-03 14:43 IST

ಕಲಬುರಗಿ: ಬೀದರ್-ಶ್ರೀರಂಗ ಪಟ್ಟಣ ಹೆದ್ದಾರಿ ಕಮಲಾಪುರ ಹೊರವಲಯದಲ್ಲಿ ಖಾಸಗಿ ಬೆಂಕಿ ಹೊತ್ತಿ ಸುಮಾರು 7 ಮಂದಿ ಪ್ರಯಾಣಿಕರು ಸಾವನ್ನಪ್ಪಿರುವ ಘಟನೆ ಇಂದು ಬೆಳಗ್ಗಿನ ಜಾವ ನಡೆದಿದೆ.

ಗೋವಾ ಮೂಲದ  ಖಾಸಗಿ ಬಸ್ ನಲ್ಲಿ  ಬೆಂಕಿ ಕಾಣಿಸಿಕೊಂಡಿದೆ. ಬೆಳಗ್ಗೆ 6.30ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದ್ದು, ಆರಂಭದಲ್ಲಿ 7 ಮಂದಿ ಮೃತಪಟ್ಟಿರುವ ಬಗ್ಗೆ ಶಂಕೆ ವ್ಯಕ್ತವಾಗಿತ್ತು. ಇದೀಗ ತೆಲಂಗಾಣ ಮೂಲದ 7 ಮಂದಿ ಮೃತಪಟ್ಟಿರುವುದಾಗಿ ಎಂದು ಕಮಲಾಪುರ ಠಾಣೆ ಪೊಲೀಸರು ಖಚಿತಪಡಿಸಿದ್ದಾರೆ. 

ತೆಲಂಗಾಣದ ಹೈದರಬಾದ್‌ನಿಂದ ಗೋವಾಕ್ಕೆ ತೆರಳುತ್ತಿದ್ದ ಸುಮಾರು 30ಕ್ಕೂ ಹೆಚ್ಚು ಜನ ಪ್ರಯಾಣಿಕರಿದ್ದ ಖಾಸಗಿ ಬಸ್ ಟೆಂಪೊ ಒಂದಕ್ಕೆ ಢಿಕ್ಕಿ ಹೊಡೆದು ಕಂದಕಕ್ಕೆ ಉರುಳಿ ಬಿದ್ದಿದೆ.  ಢಿಕ್ಕಿಯಾದ ರಭಸಕ್ಕೆ ಬಸ್​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. 

ಸಿಎಂ ಬೊಮ್ಮಾಯಿ ಸಂತಾಪ 

ಕಲಬುರಗಿ ಹೊರವಲಯ ಕಮಲಾಪುರ ಬಳಿ ಇಂದು ಭೀಕರ ಅಪಘಾತ ನಡೆದು ಬಸ್ ನಲ್ಲಿದ್ದ 7 ಪ್ರಯಾಣಿಕರು ಸಜೀವ ದಹನರಾಗಿ ಹಲವರು ಗಾಯಗೊಂಡಿರುವ ವಿಷಯ ತಿಳಿದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

''ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಆಶಿಸಿರುವ ಮುಖ್ಯಮಂತ್ರಿಗಳು, ಗಾಯಗೊಂಡವರು ಶೀಘ್ರವಾಗಿ ಗುಣಮುಖರಾಗಲಿ'' ಎಂದು ಹಾರೈಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News