×
Ad

ರಾಜ್ಯಸಭೆ ಚುನಾವಣೆ: ಕಾಂಗ್ರೆಸ್‌ ಶಾಸಕರಿಗೆ ವಿಪ್‌ ಜಾರಿ

Update: 2022-06-03 15:22 IST

ಬೆಂಗಳೂರು: ರಾಜ್ಯಸಭೆಯ ನಾಲ್ಕು ಸ್ಥಾನಗಳ ಜೂನ್‌ 10ರಂದು ನಡೆಯಲಿರುವ ಚುನಾವಣೆಯಲ್ಲಿ ಭಾಗವಹಿಸಿ ಪಕ್ಷದ ಅಧಿಕೃತ ಅಭ್ಯರ್ಥಿಗಳಿಗೆ ಮತ ಚಲಾಯಿಸುವಂತೆ ತನ್ನ ಪಕ್ಷ ಶಾಸಕರಿಗೆ  ಕಾಂಗ್ರೆಸ್‌ ವಿಪ್‌ ಜಾರಿಗೊಳಿಸಿದೆ.

'ಶುಕ್ರವಾರದಂದು ವಿಧಾನಸೌಧದ ಮೊದಲನೆ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ 106 ರಲ್ಲಿ ಬೆಳಗ್ಗೆ 09.00 ರಿಂದ ಸಂಜೆ 04.00 ಗಂಟೆಯವರೆಗೆ ರಾಜ್ಯಸಭಾ ಸ್ಥಾನಕ್ಕೆ ಚುನಾವಣೆಯು ನಡೆಯಲಿದ್ದು, ನಮ್ಮ ಪಕ್ಷದಿಂದ ಸ್ಪರ್ಧಿಸಿರುವ ಅಧಿಕೃತ ಅಭ್ಯರ್ಥಿಗಳಿಗೆ ಮತ ಚಲಾಯಿಸಬೇಕು' ಎಂದು ವಿಪ್ ಜಾರಿಗೊಳಿಸಿ ಪಕ್ಷದ ಎಲ್ಲ ಶಾಸಕರಿಗೂ ಪತ್ರದ ಮೂಲಕ ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ. ಅಜಯ್‌ ಸಿಂಗ್‌ ನಿರ್ದೇಶನ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News