×
Ad

ಸರ್ಕಾರಕ್ಕೆ ವಿದ್ಯಾರ್ಥಿ ಶಕ್ತಿಯ ಭಯ ತೀವ್ರವಾಗಿ ಕಾಡುತ್ತಿದೆ: ಕಾಂಗ್ರೆಸ್

Update: 2022-06-03 15:54 IST

ಬೆಂಗಳೂರು: ತುಮಕೂರಿನ ತಿಪಟೂರಿನ ಸಚಿವ ಬಿ.ಸಿ ನಾಗೇಶ್ ನಿವಾಸದ ಮುಂದೆ NSUI ಕಾರ್ಯಕರ್ತರು ನಡೆಸಿದ ಪ್ರತಿಭಟನೆ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್-ಬಿಜೆಪಿ ಮಧ್ಯೆ ವಾಕ್ಸಮರ ಶುರುವಾಗಿದೆ. 

''ಚಡ್ಡಿ ಸುಟ್ಟರೆ ಮನೆಯನ್ನೇ ಸುಡಲು ಬಂದಿದ್ದರು ಎನ್ನುತ್ತಿರುವ ಬಿಜೆಪಿ ನಾಯಕರಿಗೆ ಚಡ್ಡಿಯೇ ಅವರ ಮನೆಯಂತಾಗಿದೆಯೇ?! NSUI ಕಾರ್ಯಕರ್ತರ ಮೇಲೆ ಬೆಂಕಿ ಹಚ್ಚಲು ಬಂದಿದ್ದರು ಎಂಬ ಸುಳ್ಳುಗಳ ಮೂಲಕ ಪ್ರತಿಭಟನೆಯನ್ನು ಹತ್ತಿಕ್ಕುತ್ತಿದೆ ಎಂದರೆ ಸರ್ಕಾರಕ್ಕೆ ವಿದ್ಯಾರ್ಥಿ ಶಕ್ತಿಯ ಭಯ ತೀವ್ರವಾಗಿ ಕಾಡುತ್ತಿದೆ'' ಎಂದು ಶುಕ್ರವರ ಕಾಂಗ್ರೆಸ್ ಟ್ವೀಟ್ ಮಾಡಿದೆ.

ಪಠ್ಯ ಪುಸ್ತಕ ಪರಿಷ್ಕರಣೆ ವಿವಾದದ ಹಿನ್ನೆಲೆಯಲ್ಲಿ ಸಚಿವ ಬಿ.ಸಿ ನಾಗೇಶ್ ಅವರ ತುಮಕೂರಿನ ತಿಪಟೂರಿನ  ನಿವಾಸಕ್ಕೆ ಮುತ್ತಿಗೆ ಹಾಕಿದ NSUI ಕಾರ್ಯಕರ್ತರು, ಆರೆಸ್ಸೆಸ್ ಸಮವಸ್ತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ವಿಚಾರಕ್ಕೆ ಪ್ರತಿಕ್ರಿಯಿಸಿ ಗೃಹ ಸಚಿವ ಆರಗ ಜ್ಞಾನೇಮದ್ರ, NSUI ಕಾರ್ಯಕರ್ತರು ಸಚಿವರ ಮೆನೆಗೆ ಬೆಂಕಿ ಹಚ್ಚಲು ಮುಂದಾಗಿದ್ದರು ಎಂದು ಹೇಳಿಕೆ ನೀಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News