ಸುವರ್ಣಸೌಧದ ಮೆಟ್ಟಿಲುಗಳ ಮೇಲೆ ಶಾವಿಗೆ ಒಣ ಹಾಕಿದ ವಿಚಾರ; ಕೆಲಸಕ್ಕೆ ವಾಪಸ್ ಆದ ಮಲ್ಲವ್ವ
ಬೆಳಗಾವಿ: ಸುವರ್ಣ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಶಾವಿಗೆ ಒಣಗಿಸಿದ್ದ ಫೋಟೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬಳಿಕ ಮಹಿಳಾ ಕಾರ್ಮಿಕರೊಬ್ಬರನ್ನು ಕೆಲಸದಿಂದ ವಜಾಗೊಳಿಸಿರುವ ನಿರ್ಧಾರದ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿತ್ತು.
ಈ ಬೆನ್ನಲ್ಲೇ ಬೆಳಗಾವಿ ಜಿಲ್ಲಾಧಿಕಾರಿ ನಿತೀಶ್ ಪಾಟೀಲ್ ಸ್ಪಷ್ಟನೆ ನೀಡಿದ್ದು, ಕಾರ್ಮಿಕ ಮಹಿಳೆಯನ್ನು ಕೆಲಸದಿಂದ ತೆಗೆದು ಹಾಕಿಲ್ಲ ಎಂದು ಹೇಳಿದ್ದಾರೆ.
ಮಹಿಳಾ ಕಾರ್ಮಿಕೆಯನ್ನು ಕೆಲಸದಿಂದ ವಾಜಾಗೊಳಿಸಿರುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ #IStandWithMallavva ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ ಅಭಿಯಾನ ನಡೆದಿತ್ತು. ಶ್ಯಾವಿಗೆ ಒಣ ಹಾಕಿದ ಮಲ್ಲಮ್ಮರನ್ನು ಕೆಲಸದಿಂದ ಕಿತ್ತುಹಾಕುವ ಮೂಲಕ ಲೋಕೋಪಯೋಗಿ ಕ್ರಮ ಕೈಗೊಂಡಿತ್ತು. ಆದರೆ, ಸುವರ್ಣ ವಿಧಾನಸೌಧದ ಮೆಟ್ಟಿಲ ಮೇಲೆ ಶ್ಯಾವಿಗೆ ಒಣ ಹಾಕಿದ್ದು ಅಷ್ಟು ಘನಘೋರ ತಪ್ಪೇ ಎಂದು ಜನರು ಪ್ರಶ್ನೆ ಮಾಡಿದ್ದರು.
ಈ ಕುರಿತು ಟಿವಿ ವಾಹಿನಿಯೊಂದಕ್ಕೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ, ಮಲ್ಲಮ್ಮರನ್ನು ಕೆಲಸದಿಂದ ತೆಗೆದು ಹಾಕಿರಲಿಲ್ಲ. ಇನ್ನೊಂದು ಸೈಟ್ ನಲ್ಲಿ ಕೆಲಸ ನೀಡಲಾಗಿತ್ತು. ಅಲ್ಲಿಂದ ಮತ್ತೆ ಸುವರ್ಣ ಸೌಧದದಲ್ಲಿ ಕೆಲಸ ನೀಡುವಂತೆ ಹೇಳಿರುವುದಾಗಿ ತಿಳಿಸಿದ್ದಾರೆ.